alex Certify `ಕಲಿಕಾ ಚೇತರಿಕೆ’ ಕಾರ್ಯಕ್ರಮ : ರಾಜ್ಯದ ಶಾಲಾ ಶಿಕ್ಷಕರಿಗೆ ಇಲ್ಲಿದೆ ಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

`ಕಲಿಕಾ ಚೇತರಿಕೆ’ ಕಾರ್ಯಕ್ರಮ : ರಾಜ್ಯದ ಶಾಲಾ ಶಿಕ್ಷಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಬೆಂಗಳೂರು : 2022-23 ನೇ ಸಾಲಿನಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮ ಸಂಬಂಧ ಕ್ಲಸ್ಟರ್ ಹಂತದಲ್ಲಿ ವಿಷಯವಾರು ಸಮಾಲೋಚನಾ ಸಭೆಗಳನ್ನು ಹಾಗೂ ತಾಲ್ಲೂಕು ಮತ್ತು ಜಿಲ್ಲಾ ಹಂತಗಳಲ್ಲಿ ಅನುಷ್ಟಾನಾಧಿಕಾರಿಗಳಿಗೆ ಪ್ರಗತಿ ಪರಿಶೀಲನಾ ಸಭೆಗಳನ್ನು ಆಯೋಜಿಸುವ ಕುರಿತು ಸೂಚನೆ ನೀಡಲಾಗಿದೆ.

2022-23 ನೇ ಸಾಲಿನಲ್ಲಿ ಕಲಿಕಾ ಚೇತರಿಕೆಗೆ ಸಂಬಂಧಿಸಿದಂತೆ ಕಲಿಕಾಫಲ ಆಧಾರಿತ, ಚಟುವಟಿಕೆ ಆಧಾರಿತ ಹಾಗೂ ನಾವಿನ್ಯಯುತ ಬೋಧನೆಗೆ ಪ್ರೋತ್ಸಾಹ ನೀಡಲು, ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಅನುಷ್ಠಾನ ಮಾಡುತ್ತಿರುವ ಸಂದರ್ಭದಲ್ಲಿ ಕಂಡುಬರುವ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ಕಲಿಕಾ ಚೇತರಿಕೆ ಕಾರ್ಯಕ್ರಮವು ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಲು ಅಕ್ಟೋಬರ್ 2022 ರಿಂದ ಫೆಬ್ರವರಿ 2023 ರವರೆಗೆ ಒಟ್ಟು 05 ಕ್ಲಸ್ಟರ್ ಸಭೆಯನ್ನು ನಡೆಸಲಾಯಿತು. ಅದಕ್ಕೂ ಹಿಂದಿನ ವರ್ಷಗಳಲ್ಲಿ ಸಹ ಸಿ.ಆರ್.ಪಿ. ಗಳ… ನೇತೃತ್ವದಲ್ಲಿ ಎಲ್ಲಾ ಶಿಕ್ಷಕರನ್ನು ಒಳಗೊಂಡಂತೆ ಕ್ಲಸ್ಟರ್ ಸಭೆಗಳನ್ನು ನಡೆಸಲಾಗುತ್ತಿತ್ತು.

2023-24 ನೇ ಸಾಲಿನಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಕಲಿಕಾ ಫಲ ಆಧಾರಿತ ಚಟುವಟಿಕೆ ಆಧಾರಿತ ಅನ್ವಯಿಕ, ವೈಚಾರಿಕ, ವಿಮರ್ಶಾತ್ಮಕವಾಗಿ ಯೋಚಿಸುವಂತ ಕಲಿಕೆಯಾಗಬೇಕಾಗಿರುವುದರಿಂದ ಹಾಗೂ ಶಿಕ್ಷಕರಿಗೆ ನಿರಂತರ ಶೈಕ್ಷಣಿಕ ಅಭಿವೃದ್ಧಿಗೆ ವೇದಿಕೆ ಕಲ್ಪಿಸಿಕೊಡಬೇಕಾಗಿರುವುದರಿಂದ ಕ್ಲಸ್ಟರ್ ಮಟ್ಟದಲ್ಲಿ ನಲಿಕಲಿ ಶಿಕ್ಷಕರು, ಭಾಷಾ ಶಿಕ್ಷಕರು ಮತ್ತು ಕೋರ್ ವಿಷಯ ಶಿಕ್ಷಕರುಗಳಿಗೆ ಪ್ರತ್ಯೇಕವಾಗಿ ಸಮಾಲೋಚನಾ ಸಭೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಈ ಸಮಾಲೋಚನಾ ಸಭೆಗಳಲ್ಲಿ ಶಿಕ್ಷಕರು ಆಯಾ ವಿಷಯದಲ್ಲಿ ತಮ್ಮ ವಿಷಯ ಬೋಧನೆಯ ಕಿಟ್ಯಾಂಶಗಳನ್ನು ಗುರುತಿಸಿಕೊಂಡು ಸಂದೇಹಗಳನ್ನು ಪರಿಹರಿಸಿಕೊಳ್ಳುವುದರ ಜೊತೆಗೆ ಕಲಿಕಾ ಫಲಗಳ ಕುರಿತು ಸ್ಪಷ್ಟನೆ, ಆ ಕಲಿಕಾ ಫಲಗಳನ್ನು ಪಡೆಯಲು ಬಳಸುವ ಕಾರ್ಯತಂತ್ರ ಅನುಭವಾತ್ಮಕ ಕಲಿಕೆಗೆ ಬೇಕಾದ ಸಂಪನ್ಮೂಲ, ಕೌಶಲ ಇತ್ಯಾದಿಗಳನ್ನು ಪಡೆದು ಕೊಳ್ಳಬೇಕಿದೆ. ಅದಕ್ಕಾಗಿ ಸಂಬಂಧಿತರು ಈ ಕೆಳಕಂಡಂತೆ ಕ್ರಮ ವಹಿಸುವುದು.

  1. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಕ್ಲಸ್ಟರ್ ಮಟ್ಟದಲ್ಲಿ ಸಮಾಲೋಚನಾ ಸಭೆ ನಡೆಸುವುದು.

  1. ನಲಿಕಲಿ ಶಿಕ್ಷಕರು, 04 ರಿಂದ 08 ನೇ ತರಗತಿಗೆ ಬೋಧಿಸುವ ಭಾಷಾ ಶಿಕ್ಷಕರು ಮತ್ತು ಕೋರ್ ವಿಷಯ ಶಿಕ್ಷಕರುಗಳಿಗೆ ಪ್ರತ್ಯೇಕ ಸಮಾಲೋಚನಾ ಸಭೆ ನಡೆಸುವುದು.

  1. ಸೆಪ್ಟೆಂಬರ್ 2023 ರಿಂದ ಫೆಬ್ರವರಿ 2024 ರವರೆಗೆ ಒಟ್ಟು 05 ಸಮಾಲೋಚನಾ ಸಭೆ ನಡೆಸುವುದು.

  1. ವಿಷಯವಾರು ಸಂಪನ್ಮೂಲ ಶಿಕ್ಷಕರನ್ನು ಮಾರ್ಗದರ್ಶಕರಾಗಿ ನೇಮಿಸಿಕೊಂಡು ಅವರಿಗೆ ಸಮಾಲೋಚನಾ ಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳ ಬಗ್ಗೆ ಪೂರ್ವಭಾವಿಯಾಗಿ ಪ್ರತಿ ಬುಧವಾರ ಅಥವಾ ಗುರುವಾರ ತರಬೇತಿ ನೀಡಿ ಸಿದ್ಧಗೊಳಿಸುವ ಬಗ್ಗೆ ಉಪನಿರ್ದೇಶಕರು (ಅಭಿವೃದ್ಧಿ) ರವರು ಕ್ರಮವಹಿಸುವುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...