
@ValaAfshar ಟ್ವಿಟ್ಟರ್ ಖಾತೆಯಲ್ಲಿ ದಾಳಿಂಬೆ ಹಣ್ಣನ್ನು ಹೇಗೆ ಸುಲಭವಾಗಿ ಸುಲಿಯುವುದು ಅನ್ನೊ ವೀಡಿಯೊ ಒಂದನ್ನ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ದಾಳಿಂಬೆ ಹಣ್ಣನ್ನು ಮೊದಲು ಗಿಡದಿಂದ ಕೀಳುತ್ತಾನೆ. ಗಿಡದಲ್ಲಿ ಇರೋ ಒಂದೊಂದು ಹಣ್ಮನ್ನು ಕೂಡಾ ಪ್ಲಾಸ್ಟಿಕ್‌ನಿಂದ ಕವರ್ ಮಾಡಿರ್ತಾರೆ, ಆ ಕವರ್‌ನ ತೆಗೆದು ಆ ಹಣ್ಮನ್ನ ಆ ವ್ಯಕ್ತಿ ತುಂಬಾ ಸುಲಭವಾಗಿ ಕತ್ತರಿಸುವುದಲ್ಲದೇ ದಾಳಿಂಬೆ ಹಣ್ಣಿನಿಂದ ಬೀಜವನ್ನು ಕೂಡಾ ಅಷ್ಟೇ ಸುಲಭವಾಗಿ ಬಿಡಿಸುತ್ತಾನೆ. ಈ ವೀಡಿಯೋ ನೋಡಿದಾಗಲೇ ಎಷ್ಟೋ ಜನರಿಗೆ ದಾಳಿಂಬೆ ಹಣ್ಣನ್ನ ಹೀಗೂ ಬಿಡಿಸಬಹುದು ಅಂತ ಅನಿಸಿರುತ್ತೆ..
ಈ ವಿಡಿಯೋವನ್ನ ಈಗಾಗಲೇ 30 ಲಕ್ಷಕ್ಕೂ ಹೆಚ್ಚು ವೀಕ್ಷಿಸಿದ್ದಾರೆ. ಹಲವರು ಈ ವೀಡಿಯೋ ನೋಡಿ ಕಾಮೆಂಟ್ ಹಾಕಿದ್ದಾರೆ. ಅನೇಕರು ಈ ವಿಡಿಯೋ ನೋಡಿ ಇದೇ ರೀತಿ ಹಣ್ಣನ್ನ ಕತ್ತರಿಸೋಕೆ ಮಾಡಿದ ಪ್ರಯತ್ನ ವ್ಯರ್ಥವಾಗಿದೆ ಎಂದು ಕಾಮೆಂಟ್ ಹಾಕಿದ್ದಾರೆ. ಇನ್ನೂ ಕಲವರು ನನ್ನ ಬಿಳಿ ಶರ್ಟ್ ಹಾಳಾಗಿದೆ ಎಂದು ಬರೆದಿದ್ದಾರೆ. ಒಬ್ಬರಂತೂ ವೀಡಿಯೋ ನೋಡಿದ ನಂತರ ಕಳೆದ 30 ವರ್ಷಗಳಿಂದ ನಾನು ದಾಳಿಂಬೆ ಹಣ್ಮನ್ನ ತಪ್ಪಾಗಿ ಕತ್ತರಿಸುತ್ತಿದೆ ಅಂತ ನನಗೆ ಈಗ ಅರಿವಾಗಿದೆ ಎಂದು ತಮ್ಮ ಅನಿಸಿಕೆ ಹೇಳಿಕೊಂಡಿದ್ದಾರೆ.