ರಾಜಸ್ತಾನದ ಉದಯಪುರ ಜಿಲ್ಲೆ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷ ನತ್ತೇಖಾನ್ ಪಠಾಣ್ ಮಹಿಳೆಯೊಂದಿಗೆ ಖಾಸಗಿಯಾಗಿ ರೊಮ್ಯಾನ್ಸ್ ಮಾಡಿದ ವಿಡಿಯೋ ಹೊರಬಿದ್ದ ನಂತರ ಅವರನ್ನು ಸ್ಥಾನದಿಂದ ತೆಗೆದುಹಾಕಲಾಗಿದೆ.
ನತ್ತೇಖಾನ್ ಪಠಾಣ್ ಮೊಬೈಲ್ ಫೋನ್‌ನಲ್ಲಿ ಸೆರೆಯಾಗಿದ್ದ ವೀಡಿಯೊವನ್ನು ಗುಂಪಿನಲ್ಲಿ ಹಂಚಿಕೊಂಡ ಬಳಿಕ ತ್ವರಿತವಾಗಿ ಭಾರೀ ವೈರಲ್ ಆಯಿತು. ನತ್ತೇಖಾನ್ ಪಠಾಣ್ ಆಕಸ್ಮಿಕವಾಗಿ ತನ್ನದೇ ಆದ ರೋಮ್ಯಾನ್ಸ್ ವೀಡಿಯೊವನ್ನು ಹಂಚಿಕೊಂಡಿದ್ದ.
ವರದಿಗಳ ಪ್ರಕಾರ ಸೋಮವಾರ ರಾತ್ರಿ ನತ್ತೇ ಖಾನ್ ಪಠಾಣ್ ಆಕಸ್ಮಿಕವಾಗಿ ವಾಟ್ಸಪ್ ಗುಂಪಿನಲ್ಲಿ ಆಕ್ಷೇಪಾರ್ಹ ವೀಡಿಯೊವನ್ನು ಪೋಸ್ಟ್ ಮಾಡಿದ್ದ. ತಪ್ಪಿನ ಅರಿವಾದ ತಕ್ಷಣ ಪಠಾಣ್ ಆರು ವಿಡಿಯೋಗಳು ಮತ್ತು ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಆದರೆ ಆ ವೇಳೆಗಾಗಲೇ ವೀಡಿಯೋ ಡೌನ್‌ಲೋಡ್ ಆಗಿದ್ದು, ವಿವಿಧ ಗುಂಪುಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಡಿತ್ತು.
ಪಠಾಣ್ ತನ್ನ ಸ್ನೇಹಿತೆಯೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿ ಇರುವುದನ್ನು ವೀಡಿಯೊ ತೋರಿಸುತ್ತದೆ. ಪಠಾಣ್ ಮದ್ಯಪಾನ ಮಾಡಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ವೀಡಿಯೊಗೆ ಪ್ರತಿಕ್ರಿಯೆಯಾಗಿ ನತ್ತೇಖಾನ್ ಪಠಾಣ್ 57 ಸೆಕೆಂಡುಗಳ ಕ್ಲಿಪ್ ಬಿಡುಗಡೆ ಮಾಡಿ ವೈರಲ್ ವೀಡಿಯೊದಲ್ಲಿರುವ ಮಹಿಳೆ ತನ್ನ ನಾಲ್ಕನೇ ಹೆಂಡತಿ ಮತ್ತು ಇದು ವೈಯಕ್ತಿಕ ವಿಷಯ ಎಂದು ಹೇಳಿಕೊಂಡಿದ್ದಾರೆ.
ರಾಜಕೀಯ ವಿರೋಧದ ಕಾರಣದಿಂದ ತಮ್ಮ ವರ್ಚಸ್ಸು ಹಾಳು ಮಾಡಲು ಉದ್ದೇಶಪೂರ್ವಕವಾಗಿ ವಿಡಿಯೋ ಪ್ರಸಾರ ಮಾಡಲಾಗಿದೆ ಎಂದು ಆರೋಪಿಸಿದರು. ಪಕ್ಷವು ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಅವರನ್ನು ಸ್ಥಾನದಿಂದ ಕೆಳಗಿಳಿಸಿ ರಾಜ್ಯ ಮಟ್ಟದ ನಾಯಕರಿಗೆ ಮಾಹಿತಿ ನೀಡಿದೆ.