![](https://kannadadunia.com/wp-content/uploads/2023/03/bce36ba6-2ee3-45ff-ba1d-572fe62d6c70.jpg)
ಕೆಲಸದಿಂದ ತೆಗೆದು ಹಾಕಲಾದ ಉದ್ಯೋಗಿಗಳ ಪೈಕಿ ತಾಯ್ತನದ ರಜೆಯಲ್ಲಿರುವವರಿಗೆ, ತಾಯ್ತನದ ಮಿಕ್ಕ ಅವಧಿಗೆ ಸಂಬಳ ಕೊಡುವುದಿಲ್ಲ ಎಂದು ಗೂಗಲ್ ತಿಳಿಸಿದೆ.
ಅನುಮತಿ ಮೇರೆಗೆ ಪಡೆಯಲಾದ ವೈದ್ಯಕೀಯ ರಜೆಗಳ ವಿಚಾರದಲ್ಲಿ ಮಾತು ಉಳಿಸಿಕೊಳ್ಳಲು ಗೂಗಲ್‌ಗೆ ಉದ್ಯೋಗಿಗಳು ಆಗ್ರಹಿಸಿದ್ದಾರೆ. ಗೂಗಲ್‌ನಲ್ಲಿ ಕೆಲಸ ಕಳೆದುಕೊಂಡ ನೂರಕ್ಕೂ ಹೆಚ್ಚು ಉದ್ಯೋಗಿಗಳು ’ಲೇಡ್ ಆಫ್ ಆನ್ ಲೀವ್’ ಹೆಸರಿನಲ್ಲಿ ಸಮಾನ ಮನಸ್ಕರ ಗುಂಪು ಮಾಡಿಕೊಂಡಿದ್ದಾರೆ.
ಜನವರಿಯಲ್ಲಿ ಕೆಲಸದಿಂದ ತೆಗೆದುಹಾಕುವ ಮುನ್ನ ಇದ್ದ ನಿಯಮದಂತೆ, ತಾಯ್ತನದ ರಜೆಯಲ್ಲಿ ಮಿಕ್ಕ ವಾರಗಳು ಹಾಗೂ ತಿಂಗಳುಗಳ ಮಟ್ಟಿಗೆ ವೇತನ ನೀಡಬೇಕೆಂದು ಉನ್ನತ ಅಧಿಕಾರಿಗಳಿಗೆ ವಿನಂತಿಸಿಕೊಂಡಿದ್ದಾರೆ.
ಗೂಗಲ್ ಸಿಇಓ ಸುಂದರ್ ಪಿಚ್ಚೈ, ಸಿಪಿಓ ಫಿಯೋನಾ ಸಿಕ್ಕೋನಿಗೆ ಈ ಸಂಬಂಧ ಉದ್ಯೋಗಿಗಳು ಅದಾಗಲೇ ಮೂರು ಬಾರಿ ಪತ್ರ ಬರೆದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ತಾಯ್ತನದ ರಜೆ, ಮಗುವಿನೊಂದಿಗೆ ಸಮಯ ಕಳೆಯಲು ರಜೆ, ಆರೈಕೆಯ ರಜೆ, ವೈದ್ಯಕೀಯ ರಜೆ ಹಾಗೂ ವೈಯಕ್ತಿಕ ಕಾರಣಗಳಿಗೆ ರಜೆಗಳನ್ನು ಪಡೆದವರನ್ನು ಈ ಗುಂಪಿನಲ್ಲಿ ಸೇರಿಸಲಾಗಿದೆ.
ತಾಂತ್ರಿಕ ಜಗತ್ತಿನಲ್ಲಿ ಸೇಲ್ಸ್ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಇದೇ ಜನವರಿಯಲ್ಲಿ ಗೂಗಲ್ ತನ್ನ ಸಿಬ್ಬಂದಿ ಬಲದ 6%ನಷ್ಟು, 12,000 ಮಂದಿಯನ್ನು ಕೆಲಸದಿಂದ ಕಿತ್ತೊಗೆದಿದೆ.