ಖಾಲಿ ಕುಳಿತಾದ ಮನುಷ್ಯರ ಕೈ, ಕಿವಿ, ಮೂಗು, ಬಾಯಿಯೊಳಗೆ ಓಡಾಡುತ್ತಿರುತ್ತದೆ. ಆದ್ರೆ ಈ ಹವ್ಯಾಸ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ದೇಹದ ಕೆಲ ಭಾಗಗಳು ಸೂಕ್ಷ್ಮವಾಗಿದ್ದರೆ ಮತ್ತೆ ಕೆಲ ಭಾಗಗಳು ಕೊಳಕಿನಿಂದ ಕೂಡಿರುತ್ತವೆ. ಸೂಕ್ಷ್ಮ ಭಾಗಕ್ಕೆ ಕೊಳಕು ಸೇರಿದಾಗ ಆರೋಗ್ಯ ಸಮಸ್ಯೆ ಕಾಡುತ್ತದೆ. ಸೋಂಕು ಕಾಡಲು ಶುರುವಾಗುತ್ತದೆ.
ನಮ್ಮಲ್ಲಿ ಅನೇಕರು ಆಗಾಗಾ ಕಣ್ಣು ಉಜ್ಜಿಕೊಳ್ಳುವ ಹವ್ಯಾಸ ಹೊಂದಿರುತ್ತಾರೆ. ಇದು ತುಂಬಾ ಅಪಾಯಕಾರಿ. ಕೈನಲ್ಲಿರುವ ಕೊಳಕು ಕಣ್ಣನ್ನು ಸೇರುತ್ತದೆ. ಕಣ್ಣು ಸೂಕ್ಷ್ಮ ಭಾಗ. ಕೈ, ಉಗುರಿನಲ್ಲಿರುವ ಕೊಳಕು ಕಣ್ಣು ಸೇರಿ ಸೋಂಕಿನ ಸಮಸ್ಯೆಗೆ ಕಾರಣವಾಗುತ್ತದೆ.
ಗುದದ್ವಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬ್ಯಾಕ್ಟೀರಿಯಾ ಇರುತ್ತದೆ. ಗುದದ್ವಾರ ಮುಟ್ಟಿ ಕೈ ತೊಳೆಯದೆ ಬೇರೆ ಅಂಗಗಳನ್ನು ಮುಟ್ಟಿದ್ರೆ ದೇಹಕ್ಕೆ ಸೋಂಕು ಸುಲಭವಾಗಿ ಸೇರುತ್ತದೆ. ಗುದ ಸ್ವರ್ಶಿಸುವುದು ರೋಗವನ್ನು ಆಹ್ವಾನಿಸಿದಂತೆ.
ಅನೇಕರು ಕೈಗಳಿಂದ ಮೂಗನ್ನು ಸ್ವಚ್ಛಗೊಳಿಸುತ್ತಾರೆ. ನೀವು ಮೂಗನ್ನು ಸ್ವಚ್ಛಗೊಳಿಸುವುದಿಲ್ಲ. ಇದ್ರ ಮೂಲಕ ಮೂಗನ್ನು ಕೊಳಕು ಮಾಡ್ತಿರ. ನಿಮ್ಮ ಕೈನಲ್ಲಿರುವ ಕೊಳಕು ಮೂಗು ಸೇರಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ.
ಉಗುರು ತಿನ್ನುವುದು, ಕೈ ಕಚ್ಚುವ ಅಭ್ಯಾಸ ಕೂಡ ಒಳ್ಳೆಯದಲ್ಲ. ಕೈನಲ್ಲಿರುವ ಕೀಟಾಣುಗಳು ಉಗುರಿನ ಮೂಲಕ ಹೊಟ್ಟೆ ಸೇರುತ್ತವೆ. ಇದ್ರಿಂದ ಖಾಯಿಲೆ ಶುರುವಾಗುತ್ತದೆ.