ಕೆವಾಡಿಯಾ: ಹೈಕೋರ್ಟ್, ಸುಪ್ರೀಂಕೋರ್ಟ್ ತೀರ್ಪುಗಳು ಎಲ್ಲಾ ಭಾಷೆಗಳಲ್ಲೂ ಇರಲಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಗುಜರಾತ್ ನ ಕೆವಾಡಿಯಾದಲ್ಲಿ ಕಾನೂನು ಸಚಿವರ ಮತ್ತು ಕಾನೂನು ಇಲಾಖೆ ಕಾರ್ಯದರ್ಶಿಗಳ ಎರಡು ದಿನಗಳ ಸಮಾವೇಶದಲ್ಲಿ ವಿಡಿಯೋ ಭಾಷಣ ಮಾಡಿದ ಅವರು, ನ್ಯಾಯದಾನ ವಿಳಂಬ ದೇಶದ ಜನತೆಯ ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ.
ಕಾನೂನುಗಳನ್ನು ಸರಳ ಮತ್ತು ಪ್ರಾದೇಶಿಕ ಭಾಷೆಯಲ್ಲಿ ಬರೆಯಬೇಕು. ಆದ್ದರಿಂದ ಬಡವರು ಸಹ ಅವುಗಳನ್ನು ಅರ್ಥಮಾಡಿಕೊಳ್ಳಬಹುದು ಎಂದರು.
ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರಾದೇಶಿಕ ಭಾಷೆ ಬಳಕೆಗೆ ಒತ್ತು ನೀಡಬೇಕು. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ ಪ್ರಮುಖ ತೀರ್ಪುಗಳು ಎಲ್ಲಾ ಸ್ಥಳೀಯ ಭಾಷೆಗಳನ್ನು ಲಭ್ಯವಾಗುವಂತೆ ಮಾಡಬೇಕು. ನ್ಯಾಯಾಂಗ ವ್ಯವಸ್ಥೆಯ ಸುಧಾರಣೆಯಲ್ಲಿ ಪ್ರಾದೇಶಿಕ ಭಾಷೆಯ ಬಳಕೆ ಪ್ರಮುಖ ಪಾತ್ರ ವಹಿಸಬೇಕು. ಜನರಿಗೆ ಅರ್ಥವಾಗುವ ರೀತಿ ಕಾನೂನು ರಚಿಸಬೇಕು. ದೇಶಕ್ಕೆ ಸಂವೇದನಾಶೀಲ ನ್ಯಾಯಾಂಗ ಬೇಕು ಎಂದು ಹೇಳಿದ್ದಾರೆ.