ತೆಲುಗು ಹಾಗು ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ನಟಿ ಲಾವಣ್ಯ ತ್ರಿಪಾಠಿ 34ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.
2012ರಲ್ಲಿ ತೆರೆ ಕಂಡ ‘ಆಂದಾಲಾ ರಾಕ್ಷಸಿ’ ಎಂಬ ರೋಮ್ಯಾಂಟಿಕ್ ಚಿತ್ರದ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದ ಇವರು 2013ರಂದು ‘ದೂಸುಕೆಲ್ತಾ’ ನಲ್ಲಿ ತೆರೆ ಹಂಚಿಕೊಂಡರು. ಬಳಿಕ ‘ಬ್ರಮ್ಮನ್’ ‘ಮನಂ’ ‘ಮಿಸ್ಟರ್’ ‘ರಾಧಾ’ ‘ಯುದ್ಧಂ ಶರಣಂ’ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ತೆಲುಗು ಮತ್ತು ತಮಿಳು ಚಿತ್ರರಂಗದ ಬೇಡಿಕೆಯ ನಟಿಯಾದರು.
2022 ರಲ್ಲಿ ‘ಹ್ಯಾಪಿ ಬರ್ತಡೇ’ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ, ಲಾವಣ್ಯ ತ್ರಿಪಾಠಿ ಇತ್ತೀಚಿಗೆ ‘ಥಾನಲ್’ ಶೂಟಿಂಗ್ ನಲ್ಲಿ ನಿರತರಾಗಿದ್ದು, ಇನ್ನೇನು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇಂದು ಸಾಮಾಜಿಕ ಜಾಲತಾಣದಲ್ಲಿ ಹಲವಾರು ನಟ ನಟಿಯರು ಲಾವಣ್ಯ ತ್ರಿಪಾಠಿ ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.