alex Certify ಭಾರತದಲ್ಲಿ ಹೀರೋ ಮೋಟೋಕಾರ್ಪ್ ನ ಮೊದಲ ಅತ್ಯಾಧುನಿಕ ಪ್ರೀಮಿಯಂ ಡೀಲರ್‌ಶಿಪ್ ಆರಂಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿ ಹೀರೋ ಮೋಟೋಕಾರ್ಪ್ ನ ಮೊದಲ ಅತ್ಯಾಧುನಿಕ ಪ್ರೀಮಿಯಂ ಡೀಲರ್‌ಶಿಪ್ ಆರಂಭ

ಪ್ರೀಮಿಯಂ ಗ್ರಾಹಕರ ಅನುಭವದ ಹೊಸ ಯುಗಕ್ಕೆ ನಾಂದಿ ಹಾಡಿರುವ, ವಿಶ್ವದ ಅತಿದೊಡ್ಡ ಮೋಟಾರ್‌ಸೈಕಲ್‌ಗಳು ಮತ್ತು ಸ್ಕೂಟರ್‌ಗಳ ತಯಾರಕರಾದ ಹೀರೋ ಮೋಟೋಕಾರ್ಪ್, ಇಂದು ‘ಹೀರೋ ಪ್ರೀಮಿಯಾ’, ತನ್ನ ಮೊದಲ ಪ್ರೀಮಿಯಂ ಡೀಲರ್‌ಶಿಪ್, ಅನ್ನು ಕೇರಳದ ಕ್ಯಾಲಿಕಟ್‌ನಲ್ಲಿ ಉದ್ಘಾಟಿಸಿದೆ. ಕ್ಯಾಲಿಕಟ್‌ನಲ್ಲಿ ವಾಹನಗಳ ಕೇಂದ್ರ ಜಾಗದಲ್ಲಿರುವ ಹೀರೋ ಪ್ರೀಮಿಯಾ ತನ್ನ ವಿವೇಚನಾಶೀಲ ಗ್ರಾಹಕರಿಗೆ ಅಪ್ರತಿಮ ಪ್ರೀಮಿಯಂ ವಾಹನಗಳ ಮಾರಾಟ ಮತ್ತು ಸೇವಾ ಅನುಭವವನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ.

ಸಂದರ್ಶಕರಿಗೆ ಹೊಸ ವಾಹನಗಳ ಅನುಭವವನ್ನು ನೀಡುವ ಹೀರೋ ಪ್ರೀಮಿಯಾ, ಆಧುನಿಕ ವಾಸ್ತುಶಿಲ್ಪ, ಆಕರ್ಷಕ ವಿನ್ಯಾಸ ಮತ್ತು ಹೊಸ-ಯುಗದ ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸಿಕೊಂಡಿದೆ. ಇಲ್ಲಿ ಅತ್ಯುತ್ತಮ ದರ್ಜೆಯ ಪ್ರೀಮಿಯಂ ವಾಹನವನ್ನು ಹೊಂದಿರುವ ಅನುಭವ ದೊರೆಯುತ್ತದೆ. ವೃತ್ತಿಪರವಾಗಿ ತರಬೇತಿ ಪಡೆದ ಮಾರಾಟ ಸಲಹೆಗಾರರ ತಂಡ ಗ್ರಾಹಕರಿಗೆ, ಅವರವರ ಓಡಾಟದ ಅಗತ್ಯತೆಗಳಿಗೆ ಅನುಗುಣವಾಗಿ, ವೈಯಕ್ತಿಕ ಸಲಹೆಗಳನ್ನು ನೀಡುತ್ತದೆ.

ಹೀರೋ ಪ್ರೀಮಿಯಾ, ಹೊಸದಾಗಿ ಬಿಡುಗಡೆಯಾದ ಪ್ರಮುಖ ಮೋಟಾರ್‌ಸೈಕಲ್ ಕರಿಜ್ಮಾ ಎಕ್ಸ್.ಎಂ.ಆರ್ ಸೇರಿದಂತೆ, ಹೀರೋ ಮೋಟೋಕಾರ್ಪ್‌ನ ಪ್ರೀಮಿಯಂ ಉತ್ಪನ್ನಗಳ ಶ್ರೇಣಿಯನ್ನು ಪ್ರದರ್ಶಿಸುತ್ತದೆ. ನಗರ ಪ್ರಯಾಣಿಕರಿಗೆ ಪರಿಣಾಮಕಾರಿಯಾಗಿ ಹಸಿರು ಪರ್ಯಾಯವನ್ನು ಒದಗಿಸುವ ಇಲೆಕ್ಟ್ರಿಕ್ ಹೀರೋ ಪ್ರೀಮಿಯಾ ವಿಡಾ ವಿ1 ಸ್ಕೂಟರ್‌ಗಳು ಇಲ್ಲಿವೆ. ಹೀರೋ ಮೋಟೋಕಾರ್ಪ್ ನ ಮೊದಲ ಸಹ-ಅಭಿವೃದ್ಧಿಪಡಿಸಿದ ಮೋಟಾರ್‌ಸೈಕಲ್, ಹಾರ್ಲೇ-ಡೇವಿಡ್ಸನ್ X440 ಮೊದಲ ಅನುಭವವನ್ನು ಕೂಡ ಗ್ರಾಹಕರು ಇಲ್ಲಿ ಹೊಂದಬಹುದು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...