alex Certify ಉತ್ತಮ ಆರೋಗ್ಯಕ್ಕೆ ಮೂಲ ನಗು; ಇಲ್ಲಿದೆ ನಾವು ತಿಳಿಯಲೇಬೇಕಾದ ಖುಷಿಯ ಮಹತ್ವ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತಮ ಆರೋಗ್ಯಕ್ಕೆ ಮೂಲ ನಗು; ಇಲ್ಲಿದೆ ನಾವು ತಿಳಿಯಲೇಬೇಕಾದ ಖುಷಿಯ ಮಹತ್ವ….!

ವಿಶ್ವ ಸ್ಮೈಲ್ ದಿನಾಚರಣೆ ಬಹಳ ವಿಶೇಷವಾದ ಅರ್ಥವನ್ನು ಹೊಂದಿದೆ. ನಗುವಿನ ಮೂಲಕ ಸದ್ಭಾವನೆ ಮತ್ತು ಸಕಾರಾತ್ಮಕತೆಯನ್ನು ಉತ್ತೇಜಿಸುವುದು ಇದರ ಉದ್ದೇಶ. ಅಮೆರಿಕದ ವಾಣಿಜ್ಯ ಕಲಾವಿದ ಹಾರ್ವೆ ಬಾಲ್ ಈ ದಿನವನ್ನು ಆಚರಿಸಲು ಪ್ರಾರಂಭಿಸಿದರು. ಅವರು 1963ರಲ್ಲಿ ಐಕಾನಿಕ್ ಸ್ಮೈಲಿ ಫೇಸ್ ಅನ್ನು ರಚಿಸಿದರು. ಕೇವಲ ನಗುವಿನ ಮೂಲಕ ದಯೆ ಮತ್ತು ಸಂತೋಷವನ್ನು ಹರಡಬಹುದು ಎಂಬುದು ಅವರ ಅಭಿಪ್ರಾಯವಾಗಿತ್ತು. ನಗು ಕೂಡ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಸೂತ್ರಗಳಲ್ಲೊಂದು. ಜೀವನದ ಪ್ರತಿ ಕ್ಷಣದಲ್ಲೂ ನಾವು ನಗುತ್ತಿರಬೇಕು, ಏಕೆಂದರೆ ಅದು ಅಸಂಖ್ಯಾತ ಪ್ರಯೋಜನಗಳನ್ನು ಹೊಂದಿದೆ.

ನಗುವಿನ ಪ್ರಯೋಜನಗಳು

ಮೂಡ್ ಉತ್ತಮವಾಗಿರುತ್ತದೆ ನಾವು ನಕ್ಕಾಮೆದುಳು ಸಂತೋಷದ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಇದರಲ್ಲಿ ಸಿರೊಟೋನಿನ್, ಡೋಪಮೈನ್ ಮತ್ತು ಎಂಡಾರ್ಫಿನ್ ಸೇರಿವೆ. ಇವು ನೈಸರ್ಗಿಕ ನೋವು ನಿವಾರಕಗಳು. ನಾವು ಹೃದಯಾಂತರಾಳದಿಂದ ನಗುತ್ತಿದ್ದೇವೆಯೋ ಅಥವಾ ಬಲವಂತವಾಗಿ ನಗುತ್ತಿದ್ದೇವೆಯೋ ಎಂಬುದು ಮುಖ್ಯವಲ್ಲ. ಹೇಗಿದ್ದರೂ ನಗು ನಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ.

ಒತ್ತಡದಿಂದ ಮುಕ್ತಿಮುಗುಳ್ನಗೆ ಬೀರಿದರೆ ಒತ್ತಡ ಮತ್ತು ಖಿನ್ನತೆಯಿಂದ ಸುಲಭವಾಗಿ ಮುಕ್ತಿ ಸಿಗುತ್ತದೆ ಎಂಬುದು  ಅಧ್ಯಯನಗಳಲ್ಲಿ ಸಾಬೀತಾಗಿದೆ. ನಗು, ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ನಕ್ಕಾಗ ನಮ್ಮ ಮೆದುಳು ಕಾರ್ಟಿಸೋಲ್, ಅಡ್ರಿನಾಲಿನ್ ಮತ್ತು ನೊರ್ಪೈನ್ಫ್ರಿನ್ ಅನ್ನು ಉಂಟುಮಾಡುವ ನರಪ್ರೇಕ್ಷಕಗಳನ್ನು ಬಿಡುಗಡೆ ಮಾಡುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ನಗು ನಮ್ಮ ಮೆದುಳಿನಲ್ಲಿ ಸಿರೊಟೋನಿನ್ ಹಾರ್ಮೋನ್ ಬಿಡುಗಡೆಗೆ ಕಾರಣವಾಗುತ್ತದೆ. ರೋಗನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ಇದು ಪ್ರಯೋಜನಕಾರಿ. ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುವ ಬಿಳಿ ರಕ್ತ ಕಣಗಳ ಮೊನೊಸೈಟ್‌ಗಳು ಮತ್ತು ಲಿಂಫೋಸೈಟ್‌ಗಳನ್ನು ಸಹ ಇದು ಉತ್ಪಾದಿಸುತ್ತದೆ.

ಇತರರಿಗೂ ಪ್ರಯೋಜನ – ನಗು ನಮ್ಮೆಲ್ಲಾ ನೋವನ್ನು ಮರೆಸುತ್ತದೆ. ನಗುತ್ತಿದ್ದರೆ ಧನಾತ್ಮಕ ವೈಬ್‌ಗಳು ಇನ್ನೊಬ್ಬ ವ್ಯಕ್ತಿಗೆ ವರ್ಗಾಯಿಸಲ್ಪಡುತ್ತವೆ. ಇದರಿಂದ ಇತರರೂ ಸಂತೋಷವಾಗಿರುತ್ತಾರೆ. ಸಂತೋಷದಿಂದ ಕೆಲಸದ ಉತ್ಪಾದಕತೆ ಹೆಚ್ಚಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...