ಭರತ್ ರಾಜ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಲಾಫಿಂಗ್ ಬುದ್ಧ’ಚಿತ್ರದ ಟ್ರೈಲರ್ ನಿನ್ನೆ ಯಷ್ಟೇ ರಿಷಬ್ ಶೆಟ್ಟಿ ಫಿಲಂಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು, ನೋಡುಗರ ಗಮನ ಸೆಳೆಯುವ ಮೂಲಕ ಸಾಕಷ್ಟು ನಿರೀಕ್ಷೆ ಮೂಡಿಸಿದೆ.
ಈ ಚಿತ್ರವನ್ನು ರಿಶಬ್ ಶೆಟ್ಟಿ ಅವರು ತಮ್ಮ ರಿಶಬ್ ಶೆಟ್ಟಿ ಫಿಲಂಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದು, ಪ್ರಮೋದ್ ಶೆಟ್ಟಿ, ತೇಜು ಬೆಳವಾಡಿ, ಸುಂದರ್ ರಾಜ್, ಹಾಗೂ ದಿಗಂತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಷ್ಣು ವಿಜಯ್ ಸಂಗೀತ ಸಂಯೋಜನೆ ನೀಡಿದ್ದು, ಕೆ ಎಂ ಪ್ರಕಾಶ್ ಸಂಕಲನ, ಎಸ್ ಚಂದ್ರಶೇಖರನ್ ಛಾಯಾಗ್ರಾಹಣ, ಹಾಗೂ ಆಕ್ಷನ್ ಮೂರ್ತಿ ಮತ್ತು ಗೌತಮ್ ರಾಜ್ ಅವರ ಸಾಹಸ ನಿರ್ದೇಶನವಿದೆ.