ಚಂಡೀಗಢ: ಒಂದು ದಶಕದ ನಂತರ ಪಂಜಾಬ್‌ನಲ್ಲಿ ಆಲೂಗೆಡ್ಡೆ ಬೆಳೆಗೆ ಕೊಳೆ ರೋಗ(ಶಿಲೀಂಧ್ರ ರೋಗ) ತಟ್ಟಿದೆ. ರೋಗದಿಂದ 10 ರಷ್ಟು ಬೆಳೆ ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, ರೈತರಿಗೆ ಭಾರೀ ನಷ್ಟವಾಗಿದೆ. ಸಗಟು ದರದಲ್ಲಿ ಕಿಲೋಗೆ 4 ರಿಂದ 5 ರೂ.ಗೆ ಅರ್ಧಕ್ಕಿಂತ ಹೆಚ್ಚು ಕುಸಿದಿದೆ.
ಈ ಬಾರಿ ಭತ್ತದ ನಂತರ ಗೋಧಿಯ ಬದಲು ಆಲೂಗಡ್ಡೆ ಬೆಳೆಯುವ ಮೂಲಕ ವೈವಿಧ್ಯೀಕರಣಕ್ಕೆ ಮುಂದಾಗಿದ್ದ ರೈತರು ಭಾರೀ ನಷ್ಟ ಅನುಭವಿಸಿದ್ದಾರೆ. ರಾಜ್ಯ ತೋಟಗಾರಿಕಾ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ರಾಜ್ಯದಲ್ಲಿ 1,17,000 ಹೆಕ್ಟೇರ್‌ಗಳಲ್ಲಿ ಆಲೂಗೆಡ್ಡೆ ಬೆಳೆಗಳನ್ನು ಬೆಳೆಯಲಾಗುತ್ತದೆ. ಇದರಲ್ಲಿ 10,000 ರಿಂದ 12,000 ಹೆಕ್ಟೇರ್(ಇದು ಒಟ್ಟು ಪ್ರದೇಶದ ಸುಮಾರು 8 ರಿಂದ 10 ರಷ್ಟು) ಬೆಳೆಗಳು ಹಾನಿಗೊಳಗಾಗಿವೆ. ಮಾರುಕಟ್ಟೆಯಲ್ಲಿ ಆಲೂಗೆಡ್ಡೆ ಕುಸಿದಿದೆ. ಈಗ ಕೆಜಿಗೆ 4 ರಿಂದ 5 ರೂ.ಗೆ ಮಾರಾಟವಾಗುತ್ತಿದೆ. ಕಳೆದ ವರ್ಷ ಕೆಜಿಗೆ 10 ರಿಂದ 12 ರೂ.ಗೆ ಮಾರಾಟವಾಗಿತ್ತು.