ಪಾಕಿಸ್ತಾನದಲ್ಲಿ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ)ದ ಮೋಸ್ಟ್ ವಾಂಟೆಡ್ ಉಗ್ರ ಫೈಸಲ್ ನದೀಮ್ ಅಲಿಯಾಸ್ ಅಬು ಕತಲ್‌ನನ್ನು ಶನಿವಾರ ರಾತ್ರಿ ಶೂಟ್ ಮಾಡಿ ಸಾಯಿಸಲಾಗಿದೆ ಅಂತಾ ʼಇಂಡಿಯಾ ಟುಡೆʼ ವರದಿ ಮಾಡಿದೆ. ಈ ಅಬು ಕತಲ್ 26/11 ಮುಂಬೈ ದಾಳಿಯ ಮಾಸ್ಟರ್‌ಮೈಂಡ್ ಹಫೀಜ್ ಸಯೀದ್‌ನ ಬಲಗೈ ಬಂಟ.
2023ರ ಜನವರಿಯಲ್ಲಿ ರಜೌರಿಯಲ್ಲಿ ನಡೆದ ದಾಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಈ ಅಬು ಕತಲ್ ಮತ್ತು ಪಾಕಿಸ್ತಾನ ಮೂಲದ ಇಬ್ಬರು ಎಲ್‌ಇಟಿ ಉಗ್ರರ ವಿರುದ್ಧ ಚಾರ್ಜ್‌ಶೀಟ್ ಹಾಕಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಜಾಲವನ್ನ ಮಟ್ಟಹಾಕಲು ಎನ್‌ಐಎ ಈ ಕಾರ್ಯಾಚರಣೆ ಮಾಡಿತ್ತು.
2023ರ ಜನವರಿ 1ರಂದು ರಜೌರಿಯ ಧಾಂಗ್ರಿಯಲ್ಲಿ ನಾಗರಿಕರ ಮೇಲೆ ನಡೆದ ಉಗ್ರರ ದಾಳಿ ಮತ್ತು ಮರುದಿನ ನಡೆದ ಐಇಡಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ತನಿಖೆ ನಡೆಸಿತ್ತು. ಈ ದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಏಳು ಜನ ಸತ್ತಿದ್ದರು.
ಈ ಪ್ರಕರಣದಲ್ಲಿ ಅಬು ಕತಲ್, ಸೈಫುಲ್ಲಾ ಅಲಿಯಾಸ್ ಸಜಿದ್ ಜುಟ್ ಮತ್ತು ಮೊಹಮ್ಮದ್ ಖಾಸಿಂ ಎಂಬ ಮೂವರು ಎಲ್‌ಇಟಿ ಉಗ್ರರನ್ನ ಗುರುತಿಸಲಾಗಿತ್ತು. ಇವರಲ್ಲಿ ಅಬು ಕತಲ್ ಮತ್ತು ಸಜಿದ್ ಜುಟ್ ಪಾಕಿಸ್ತಾನದವರು. ಮೊಹಮ್ಮದ್ ಖಾಸಿಂ 2002ರಲ್ಲಿ ಪಾಕಿಸ್ತಾನಕ್ಕೆ ಹೋಗಿ ಎಲ್‌ಇಟಿಗೆ ಸೇರಿದ್ದ.
ಈ ಮೂವರು ಪಾಕಿಸ್ತಾನದಿಂದ ಎಲ್‌ಇಟಿ ಉಗ್ರರನ್ನ ಜಮ್ಮು ಮತ್ತು ಕಾಶ್ಮೀರಕ್ಕೆ ಕಳಿಸಿ ನಾಗರಿಕರನ್ನ ಮತ್ತು ಭದ್ರತಾ ಸಿಬ್ಬಂದಿಯನ್ನ ಟಾರ್ಗೆಟ್ ಮಾಡ್ತಿದ್ರು ಅಂತಾ ತನಿಖೆಯಿಂದ ಗೊತ್ತಾಗಿದೆ.