ನ್ಯೂಯಾರ್ಕ್: ಅತಿ ದೊಡ್ಡ ಮತ್ತು ಅಪಾಯಕಾರಿಯಾದ ಕ್ಷುದ್ರಗ್ರಹ ಶನಿವಾರ ಭೂಮಿಯ ಅತ್ಯಂತ ಸಮೀಪದಿಂದ ಹಾದು ಹೋಗಿದೆ.
ಭೂಮಿಗೆ ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾದ 2001 ಎಫ್ 032 ಕ್ಷುದ್ರಗ್ರಹ ಭೂಮಿಗೆ ಅತೀ ಸಮೀಪದಿಂದ ಹಾದು ಹೋಗಿದೆ. ಸೂರ್ಯನನ್ನು ಪ್ರತಿ 810 ದಿನಕ್ಕೆ ಒಂದು ಸಲ ಸುತ್ತುಹಾಕುವ ಈ ಕ್ಷುದ್ರಗ್ರಹವನ್ನು 2001 ರಲ್ಲಿ ವಿಜ್ಞಾನಿಗಳು ಗುರುತಿಸಿದ್ದಾರೆ.
2021ರ ಮಾರ್ಚ್ 21 ರಂದು ರಾತ್ರಿ ಭೂಮಿಗೆ ಸಮೀಪದಲ್ಲಿ ಇದು ಹಾದುಹೋಗುವ ಬಗ್ಗೆ ಖಗೋಳತಜ್ಞರು ಲೆಕ್ಕ ಹಾಕಿದ್ದರು. ಶನಿವಾರ ರಾತ್ರಿ 9.30 ರ ವೇಳೆಗೆ ಭೂಮಿ ಸಮೀಪದಿಂದ ಈ ಕ್ಷುದ್ರಗ್ರಹ ಹಾದು ಹೋಗಿದೆ. ಈ ಸಂದರ್ಭದಲ್ಲಿ ಕ್ಷುದ್ರಗ್ರಹದ ವೇಗ 1.24 ಲಕ್ಷ ಕಿಲೋಮೀಟರ್ ನಷ್ಟು ಇತ್ತು. 440 -680 ಮೀಟರ್ ನಷ್ಟು ಅಗಲದ ಕ್ಷುದ್ರಗ್ರಹದ ಹಾದು ಹೋದಾಗ ಭೂಮಿ ನಡುವೆ 20 ಲಕ್ಷ ಕಿಲೋಮೀಟರ್ ನಷ್ಟು ಅಂತರ ಇತ್ತು ಎಂದು ಹೇಳಲಾಗಿದೆ.