ಧಾರವಾಡ: ದೋಷಪೂರಿತ ಲ್ಯಾಪ್ ಟಾಪ್ ನಲ್ಲಿ ಪೂರೈಸಿದ ಲೆನೆವೊ ಕಂಪನಿಗೆ ಸೇವಾ ನ್ಯೂನ್ಯತೆ ಪ್ರಕರಣದಡಿ ಖರೀದಿದಾರ ವಿದ್ಯಾರ್ಥಿಗೆ 52 ಸಾವಿರ ರೂ. ಪರಿಹಾರ ಒದಗಿಸಲು ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ಧಾರವಾಡ ನಗರದ ಹತ್ತಿಕೊಳ್ಳದ ನಿವಾಸಿ ಮಹ್ಮದ್ ಪೀರಜಾದೆ ಎಂಬ ವಿದ್ಯಾರ್ಥಿ ಲೆನೆವೊ ಕಂಪನಿಯ ಲ್ಯಾಪ್ ಟಾಪ್ ಅನ್ನು 42,499 ರೂ.ಗಳಿಗೆ 2020 ರ ನವೆಂಬರ್ 22 ರಂದು ಖರೀದಿಸಿದ್ದರು. ಲ್ಯಾಪ್ ಟಾಪ್ ನಲ್ಲಿ ದೋಷ ಕಂಡು ಬಂದ ನಂತರ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪ್ರಕರಣ ದಾಖಲಿಸಿದರು.
ವಿಚಾರಣೆ ನಡೆಸಿದ ಆಯೋಗ ಕಂಪನಿಯು ಸೇವಾ ನ್ಯೂನ್ಯತೆ ಎಸಗಿದೆ ಎಂದು ನಿರ್ಣಯಿಸಿ ಲ್ಯಾಪ್ ಟಾಪ್ ಮೌಲ್ಯ 42,499 ರೂ., ಸೇವಾ ನ್ಯೂನ್ಯತೆಗಾಗಿ 10 ಸಾವಿರ ರೂ.ಗಳನ್ನು ಶೇ.9 ರ ಬಡ್ಡಿ ಸಹಿತವಾಗಿ ಪರಿಹಾರ ನೀಡಬೇಕೆಂದು ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿ.ಎ. ಬೋಳಶೆಟ್ಟಿ ಹಾಗೂ ಪಿ.ಸಿ. ಹಿರೇಮಠ ತೀರ್ಪು ನೀಡಿದ್ದಾರೆ.