ಕೊಲಂಬೊ: ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ಶ್ರೀಲಂಕಾ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿರುವ ಕಡಿಮೆ ಆದಾಯದ ಕುಟುಂಬಗಳಿಗೆ ನಗದು ನೆರವು ನೀಡಲು ಮುಂದಾಗಿದೆ.
ಆರ್ಥಿಕ ಬಿಕ್ಕಟ್ಟಿನಿಂದ ತೊಂದರೆಗೊಳಗಾದವರ ಖಾತೆಗೆ 3000 ರೂ.ನಿಂದ 7500 ರೂಪಾಯಿವರೆಗೆ ನೆರವು ನೀಡಲು ಶ್ರೀಲಂಕಾ ಸರ್ಕಾರ ಮುಂದಾಗಿದೆ. ವ್ಯಾಪಾರ ಸಚಿವ ಶೆಹನ್ ಸೇಮಸಿಂಘೆ ಈ ಬಗ್ಗೆ ಮಾಹಿತಿ ನೀಡಿದ್ದು, ಸಚಿವ ಸಂಪುಟ ಸಭೆಯಲ್ಲಿ ಆರ್ಥಿಕ ಬಿಕ್ಕಟ್ಟಿನಿಂದ ತೊಂದರೆಗೊಳಗಾದ ಕುಟುಂಬದವರಿಗೆ 7500 ರೂ.ವರೆಗೆ ನೆರವು ನೀಡಲಾಗುವುದು. ಇದಕ್ಕಾಗಿ 33 ಲಕ್ಷ ಫಲಾನುಭವಿಗಳನ್ನು ಗುರುತಿಸಲಾಗಿದೆ. ವಿಶ್ವಬ್ಯಾಂಕ್ ಸಹಾಯದಿಂದ ನಗದು ನೆರವು ನೀಡಲಾಗುವುದು ಎಂದು ಹೇಳಿದ್ದಾರೆ.
ಬಡವರು, ವೃದ್ಧರು, ಮೂತ್ರಪಿಂಡ ತೊಂದರೆಗೆ ಒಳಗಾದವರು, ವಿಕಲಚೇತನರಿಗೆ ಸೇರಿ ಸಂಕಷ್ಟದಲ್ಲಿರುವವರಿಗೆ ಪರಿಹಾರ ನೀಡಲಾಗುವುದು ಎಂದು ಹೇಳಿದ್ದಾರೆ.