alex Certify ಮನೆ ಸ್ವಚ್ಛವಾಗಿದ್ದರೂ ಬಾಡಿಗೆದಾರರ ವಿರುದ್ದ ದೂರಿದ ಮನೆ ಮಾಲೀಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಸ್ವಚ್ಛವಾಗಿದ್ದರೂ ಬಾಡಿಗೆದಾರರ ವಿರುದ್ದ ದೂರಿದ ಮನೆ ಮಾಲೀಕ

ಮನೆ ಮಾಲೀಕರು ಬಾಡಿಗೆದಾರರ ಜೊತೆಗೆ ಅನೇಕ ವಿಚಾರಗಳಲ್ಲಿ ಅಸಮಾಧಾನದಿಂದ ಇರುವುದು ಹೊಸ ವಿಷಯವೇನಲ್ಲ. ನೀವು ಮನೆಗೆ ಬರುವ ಮುನ್ನ ಸೋರುತ್ತಿದ್ದ ನಲ್ಲಿಗೂ ನಿಮ್ಮ ಮೇಲೆ ಹೊಣೆ ಹೊರಿಸಿ ದುಡ್ಡು ಕೀಳುವುದು ಮನೆ ಮಾಲೀಕರ ವಿಶೇಷ ಪ್ರತಿಭೆ.

ಬಹಳ ಶುಭ್ರವಾಗಿಟ್ಟಿರುವ ತಮ್ಮ ಫ್ಲಾಟ್‌ಅನ್ನು ಮನೆ ಮಾಲೀಕರು ’ಗಲೀಜಾಗಿದೆ ’ ಎನ್ನುತ್ತಿದ್ದಾರೆ ನೋಡಿ ಎಂದು ದೂರಿದ ಬಾಡಿಗೆದಾರಿಣಿಯೊಬ್ಬರು ಮನೆಯ ವಿಡಿಯೋ ಮಾಡಿಕೊಂಡು ನೆಟ್ಟಿಗರೊಂದಿಗೆ ಹಂಚಿಕೊಂಡಿದ್ದಾರೆ.

“ನನಗೆ ಮಾಲೀಕರು ಎಂದರೆ ಆಗಿಬರುವುದಿಲ್ಲ. ಸ್ವಲ್ಪವೂ ಕೊಳೆಯಿಲ್ಲದ ನಮ್ಮ ಫ್ಲಾಟ್‌ಅನ್ನು ಗಲೀಜು ಎನ್ನುತ್ತಿದ್ದಾರೆ ನೋಡಿ,’’ ಎಂದಿದ್ದಾರೆ.

ಸ್ವಚ್ಛವಾಗಿಯೇ ಇರುವ ಅಡುಗೆ ಮನೆಯ ಬಳಿ ಓಡಾಡುತ್ತಿರುವ ಮಾಲೀಕರು, “ಗಲೀಜಾಗಿರುವ ವಸ್ತುಗಳ ಮೇಲೂ ನೀವು ವಿಡಿಯೋ ಹಿಡಿಯಬಹುದಲ್ಲ,” ಎನ್ನುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

— hans (@voteforhani) August 26, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...