
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಮಂಗಳವಾರ ನೀಡಿದ ಉತ್ತರ ಇಲ್ಲಿದೆ. ಪ್ರಶ್ನೋತ್ತರ ಅವಧಿಯಲ್ಲಿ ರಾಯಚೂರು ಸಂಸದ ಕುಮಾರ ಜಿ.ನಾಯಕ ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ.
- ಭೂರಹಿತ ರೈತರಿಗೆ ಯೋಜನೆಯ ವ್ಯಾಪ್ತಿ ಇಲ್ಲ:
- ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ಭೂರಹಿತ ರೈತರನ್ನು ಸೇರಿಸುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
- ಹಣ ವರ್ಗಾವಣೆ ಮಾಹಿತಿ:
- ಈ ಯೋಜನೆಯಡಿ ಕೇಂದ್ರ ಸರ್ಕಾರವು ಈವರೆಗೆ 19 ಕಂತುಗಳಲ್ಲಿ 3.68 ಲಕ್ಷ ಕೋಟಿ ರೂಪಾಯಿ ಮೊತ್ತವನ್ನು ರೈತರ ಖಾತೆಗಳಿಗೆ ವರ್ಗಾವಣೆ ಮಾಡಿದೆ.
- ಅರ್ಹ ರೈತರಿಗೆ ನೆರವು:
- ಯೋಜನೆಯ ಭಾಗವಾಗಿಲ್ಲದ ಎಲ್ಲ ಅರ್ಹ ರೈತರಿಗೆ ವಾರ್ಷಿಕ 6 ಸಾವಿರ ನಗದು ಪ್ರಯೋಜನ ನೀಡಲು ಸರ್ಕಾರ ಸಿದ್ಧವಾಗಿದೆ.
- ಅಂತಹ ರೈತರಿಗೆ ಹಿಂದಿನ ಕಂತುಗಳನ್ನು ನೀಡಲು ಸಿದ್ಧರಿದ್ದೇವೆ ಎಂದು ಹೇಳಿದರು.
- ಕೃಷಿ ಕಾರ್ಮಿಕರ ಸಂಖ್ಯೆ:
- 2011ರ ಜನಗಣತಿಯ ಪ್ರಕಾರ, ದೇಶದಲ್ಲಿ 26.3 ಕೋಟಿ ಜನರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.
- ಇವರಲ್ಲಿ 14.43 ಕೋಟಿ ಜನರು ಕೃಷಿ ಕಾರ್ಮಿಕರು ಹಾಗೂ 11.87 ಕೋಟಿ ಜನರು ಕೃಷಿಕರು ಎಂದು ಗುರುತಿಸಲಾಗಿದೆ.
- ಕಳೆದ ಕೆಲವು ವರ್ಷಗಳಲ್ಲಿ ಕೃಷಿ ಕಾರ್ಮಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ.
- ರಾಜ್ಯ ಸರ್ಕಾರಗಳಿಗೆ ಮನವಿ:
- ಅವರಿಗೆ ಆರ್ಥಿಕ ಭದ್ರತೆ ಒದಗಿಸಲು ಅಂತಹ ರೈತರನ್ನು ಗುರುತಿಸಿ ಯೋಜನೆಯಲ್ಲಿ ಸೇರಿಸಲು ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು ಎಂದು ಸಚಿವರು ಹೇಳಿದರು.
- ಯೋಜನೆಯ ಅರ್ಹತೆಗಳು:
- ಎಲ್ಲ ಅರ್ಹ ಫಲಾನುಭವಿಗಳು ಕನಿಷ್ಠ ಪ್ರಮಾಣದ ಭೂಮಿ ಹೊಂದಿರಬೇಕು.
- ಇ-ಕೆವೈಸಿ ಮಾಡಿಸಿಕೊಳ್ಳಬೇಕು ಮತ್ತು ಪಿಎಂ-ಕಿಸಾನ್ ಪೋರ್ಟಲ್‌ನಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳಬೇಕು.
- ನಿಧಿಯನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಮೂರು ಸಮಾನ ಕಂತುಗಳಲ್ಲಿ ವರ್ಗಾಯಿಸಲಾಗುತ್ತದೆ.
- 19ನೇ ಕಂತಿನ ಮಾಹಿತಿ:
- ʼಪ್ರಧಾನ ಮಂತ್ರಿ ಕಿಸಾನ್ ಯೋಜನೆʼಯ 19ನೇ ಕಂತನ್ನು ಫೆಬ್ರವರಿ 2025ರ ಅಂತ್ಯದ ವೇಳೆಗೆ ಅರ್ಹ ರೈತರಿಗೆ ವಿತರಿಸಲಾಗುವುದು ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ದೃಢಪಡಿಸಿದ್ದಾರೆ.