ಬೆಂಗಳೂರು: ಭೂಮಾಪಕರ ಕೊರತೆ ನೀಗಿಸಲು ಸರ್ಕಾರ ಮುಂದಾಗಿದ್ದು, ಖಾಲಿ ಇರುವ ಸುಮಾರು 3 ಸಾವಿರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದೆ.
ರಾಜ್ಯ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ ಪರವಾನಗಿ ಭೂಮಾಪಕರ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗಿದೆ. ಭೂಮಾಪನ ಇಲಾಖೆಯಲ್ಲಿ ಸುಮಾರು 3500 ಸರ್ಕಾರಿ ಭೂಮಾಪಕರು, 4 ಸಾವಿರಕ್ಕೂ ಅಧಿಕ ಪರವಾನಿಗೆ ಹೊಂದಿದ ಭೂಮಾಪಕರುಗಳಿದ್ದಾರೆ.
3000 ಮಂದಿ ಸರ್ವೇಗೆ ಮೀಸಲಾಗಿದ್ದಾರೆ. ಹೀಗಾಗಿ ಭೂಮಾಪಕರ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಜನವರಿ 21 ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದೆ.