ಕೇರಳ : ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಕೇರಳದಲ್ಲಿ ನಡೆದ ದುರಂತದ ಬಗ್ಗೆ ವಿಚಾರಿಸಿದ್ದಾರೆ.
ತಮಿಳುನಾಡು ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳು, ಅಗ್ನಿಶಾಮಕ ಸಿಬ್ಬಂದಿ ಮತ್ತು ಎಸ್ಡಿಆರ್ಎಫ್ ತಂಡವನ್ನು ರಕ್ಷಣಾ ಮತ್ತು ಪರಿಹಾರಕ್ಕೆ ಸಹಾಯ ಮಾಡಲು ವೈದ್ಯಕೀಯ ತಂಡದೊಂದಿಗೆ ನಿಯೋಜಿಸಲಿದೆ ಎಂದು ಸ್ಟಾಲಿನ್ ಘೋಷಿಸಿದ್ದಾರೆ. ಎಲ್ಲಾ ಅಧಿಕಾರಿಗಳು ಇಂದು ಹೊರಡಲು ಸಜ್ಜಾಗಿದ್ದಾರೆ. ಹಾಗೂ ಕೇರಳಕ್ಕೆ ಅವರು 5 ಕೋಟಿ ಪರಿಹಾರ ಘೋಷಿಸಿದ್ದಾರೆ.
ಸಂಸತ್ತಿನಲ್ಲಿ ಮಾತನಾಡಿದ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮಾರ್ಕ್ಸ್ ವಾದಿ (ಸಿಪಿಐ-ಎಂ) ಸದಸ್ಯರು ವಯನಾಡ್ ನಲ್ಲಿನ ಭೂಕುಸಿತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕೆಂದು ಒತ್ತಾಯಿಸಿದರು.