ಬೆಂಗಳೂರು: ಕೃಷಿ ಸಂಬಂಧಿ ಉದ್ದೇಶಕ್ಕೆ ಕೃಷಿ ಭೂಮಿಯನ್ನು ಸ್ವಯಂ ಘೋಷಣೆ ಮೂಲಕ ಪರಿವರ್ತಿಸಿಕೊಳ್ಳಲು ಅವಕಾಶ ಕಲ್ಪಿಸುವ ಭೂ ಕಂದಾಯ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ.
ಹಸು, ಕುರಿ, ಕೋಳಿ ಸಾಕಾಣೆಯಂತಹ ಕೃಷಿ ಸಂಬಂಧಿತ ಉದ್ದೇಶಕ್ಕೆ ಕೃಷಿ ಭೂಮಿ, ಭೂಪರಿವರ್ತನೆ ಸರಳಗೊಳಿಸಲು ಮಸೂದೆ ಮಂಡಿಸಲಾಗಿದೆ. ಭೂ ಕಂದಾಯ ತಿದ್ದುಪಡಿ ವಿಧೇಯಕದಲ್ಲಿ ಸ್ವಯಂ ಘೋಷಣೆ ಮೂಲಕ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗೆ ಭೂ ಪರಿವರ್ತನೆ ಮಾಡಿಕೊಳ್ಳುವ ಅಂಶ ಇದೆ.