ಬೆಂಗಳೂರು: ಜಮೀನಿಗೆ ಅತಿಕ್ರಮವಾಗಿ ಪ್ರವೇಶಿಸಿ ಕಾಂಪೌಂಡ್ ಬೀಳಿಸಿ ಜಾಗ ಸ್ವಾಧೀನಪಡಿಸಿಕೊಂಡ ಆರೋಪದ ಮೇಲೆ ನಟ ಮಯೂರ್ ಪಟೇಲ್ ಸೇರಿದಂತೆ ಹಲವರ ವಿರುದ್ಧ ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಹೆಚ್ಎಸ್ಆರ್ ಲೇಔಟ್ ನಿವಾಸಿ ಶಾಲಿನಿ ನೀಡಿದ ದೂರು ಆಧರಿಸಿ ಸುಬ್ರಹ್ಮಣ್ಯ, ಎನ್.ಆರ್. ಭಟ್, ಮಯೂರ್ ಪಟೇಲ್ ಸೇರಿ ಹಲವರ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲಾಗಿದೆ.
ಬೆಂಗಳೂರು ದಕ್ಷಿಣ ತಾಲೂಕು ಬೇಗೂರು ಹೋಬಳಿಯ ಹರಳಕುಂಟೆ ಗ್ರಾಮದಲ್ಲಿ 14.5 ಗುಂಟೆ ಜಾಗ ಶಾಲಿನಿ ಪತಿ ಮಂಜುನಾಥ ರೆಡ್ಡಿಗೆ ದಾನವಾಗಿ ಬಂದಿದೆ. ಈ ಸ್ವತ್ತಿಗೆ ಸುತ್ತಲೂ ಕಾಂಪೌಂಡ್ ಹಾಕಲಾಗಿದೆ. ಕೋರ್ಟ್ ನಲ್ಲಿ ಎನ್.ಆರ್. ಭಟ್, ಮಯೂರ್ ಪಟೇಲ್ ಹೂಡಿದ ದಾವೆ ಸಂಬಂಧ ಸಿವಿಲ್ ನ್ಯಾಯಾಲಯ ಸ್ವತ್ತಿನ ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶಿಸಿತ್ತು. ಹೀಗಿದ್ದರೂ ಶುಕ್ರವಾರ ಸುಮಾರು 50ಕ್ಕೂ ಅಧಿಕ ಮಂದಿಯನ್ನು ಕರೆದುಕೊಂಡು ಬಂದು ಜೆಸಿಬಿ ಮೂಲಕ ಕಾಂಪೌಂಡ್ ಬೀಳಿಸಿ ಕೋರ್ಟ್ ಆದೇಶ ಉಲ್ಲಂಘಿಸಿದ್ದಾರೆ ಎಂದು ಶಾಲಿನಿ ದೂರು ನೀಡಿದ್ದಾರೆ.