ಸದ್ಯ ರಾಜ್ಯ ರಾಜಕಾರಣದಲ್ಲಿ ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರ ವರ್ಗಾವಣೆ ಭಾರೀ ಸದ್ದು ಮಾಡ್ತಿದೆ. ಭೂ ಹಗರಣವೇ ಡಿಸಿ ರೋಹಿಣಿ ಸಿಂಧೂರಿ ವರ್ಗಾವಣೆಗೆ ಕಾರಣ ಎಂದು ಹೇಳಲಾಗ್ತಾ ಇತ್ತು. ಆದರೆ ಇದೀಗ ಈ ಮಾತಿಗೆ ಪುಷ್ಠಿ ನೀಡುವಂತಹ ರೋಹಿಣಿ ಸಿಂಧೂರಿಯವರ ಆಡಿಯೋವೊಂದು ವೈರಲ್ ಆಗಿದೆ.
ಭೂ ಮಾಫಿಯಾ ವಿರುದ್ಧ ಹೋರಾಡಿದ್ದಕ್ಕೆ ನನಗೆ ವರ್ಗಾವಣೆ ಭಾಗ್ಯ ಸಿಕ್ಕಿದೆ. ಶಾಸಕ ಸಾ.ರಾ. ಮಹೇಶ್ ಹಾಗೂ ಮುಡಾ ಅಧ್ಯಕ್ಷ ಹೆಚ್.ವಿ. ರಾಜೀವ್ ಷಡ್ಯಂತ್ರದಿಂದ ನನ್ನನ್ನ ವರ್ಗಾವಣೆ ಮಾಡಲಾಗಿದೆ.
ಅಧಿಕಾರಿಗಳಿಗೆ ಬೆದರಿಸಿ, ಆಮಿಷ ತೋರಿಸಿ ಭೂ ಮಾಫಿಯಾ ಮಾಡುತ್ತಿದ್ದಾರೆ. ಲಿಂಗಾಬುದಿ ಕೆರೆ ಬಳಿ ಭೂಮಿ ಒತ್ತುವರಿ ಮಾಡಿ ನಿರ್ಮಾಣವಾಗುತ್ತಿರುವ ರೆಸಾರ್ಟ್ನಲ್ಲಿ ಇವರಿಬ್ಬರೂ ಪಾಲುದಾರರಿದ್ದಾರೆ.
ಇವರಿಗೆಲ್ಲ ಇಷ್ಟೊಂದು ಹಣ ಎಲ್ಲಿಂದ ಬರುತ್ತದೆ..?ಸಾ.ರಾ. ಮಹೇಶ್ ನನ್ನ ಬಳಿ ದಾಖಲೆ ಕೇಳಿದ್ದರು. ನಾನು ನೀಡಿದ್ದೇನೆ. ಬೇರೆ ಯಾರಾದ್ರೂ ಕೇಳಿದ್ರೂ ಅವರಿಗೂ ದಾಖಲೆ ಕೊಡುತ್ತೇನೆ. ನಾನು ಭೂ ಅಕ್ರಮದ ವಿರುದ್ಧ ತನಿಖೆಗೆ ಮುಂದಾಗಿದ್ದೆ. ಆದರೆ ಸಾರಾ ಮಹೇಶ್ ಹಾಗೂ ರಾಜೀವ್ ಷಡ್ಯಂತ್ರ ಮಾಡಿ ನನ್ನ ವರ್ಗಾವಣೆ ಮಾಡಿಸಿದ್ರು ಎಂದು ಈ ಆಡಿಯೋದಲ್ಲಿ ಹೇಳಿದ್ದಾರೆ.