ಬೆಂಗಳೂರು: ಸರ್ಕಾರಿ ಜಮೀನುಗಳಲ್ಲಿ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 94ಎ(4)ಗೆ ತಿದ್ದುಪಡಿ ಮಾಡಿದ ತರುವಾಯ ನಮೂನೆ -57 ರಲ್ಲಿ ಅರ್ಜಿ ಸ್ವೀಕರಿಸಲು ಕಾಲಾವಕಾಶ ವಿಸ್ತರಿಸಲಾಗಿದೆ.
ಸರ್ಕಾರಿ ಜಮೀನುಗಳಲ್ಲಿ ಅನಧಿಕೃತ ಸಾಗುವಳಿ ಮಾಡಿಕೊಡಿರುವ ರೈತರು ಮತ್ತು ಸಣ್ಣ ರೈತರ ಹಿತ ದೃಷ್ಟಿಯಿಂದ ಇಂತಹ ಜಮೀನುಗಳನ್ನು ಸಕ್ರಮಗೊಳಿಸುವ ಮತ್ತು ಸಕ್ರಮೀಕರಣಕ್ಕಾಗಿ ಬಹಳಷ್ಟು ಅನಧಿಕೃತ ಸಾಗುವಳಿದಾರರು ತಿಳಿವಳಿಕೆ ಕೊರತೆಯಿಂದ ಅರ್ಜಿ ಸಲ್ಲಿಸದೆ ಇರುವ ಕಾರಣ ಮತ್ತೊಂದು ಅವಕಾಶ ನೀಡಲು 2022ರ ಮೇ 30 ರಿಂದ 1 ವರ್ಷದ ಅವಧಿಯವರೆಗೆ ನಮೂನೆ -57 ರಲ್ಲಿ ಅರ್ಜಿ ಸ್ವೀಕರಿಸಲು ಕಾಲಾವಕಾಶ ವಿಸ್ತರಿಸಲಾಗಿದೆ.
ಈ ಬಗ್ಗೆ ವ್ಯಾಪಕ ಪ್ರಚಾರ ನಡೆಸುವಂತೆ, ಅಗತ್ಯ ಕ್ರಮ ಕೈಗೊಳ್ಳಲು ಕಂದಾಯ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ(ಭೂ ಮಂಜೂರಾತಿ) ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.