
ಬೆಂಗಳೂರು: ಭೂಕಂದಾಯ ಕಾಯ್ದೆಯಲ್ಲಿನ ಲೋಪದಿಂದಾಗಿ ಶಿಕ್ಷೆಗೆ ಗುರಿಯಾಗುತ್ತಿರುವ ಸಣ್ಣ ಮತ್ತು ಅತಿ ಸಣ್ಣ ರೈತರ ಸಮಸ್ಯೆ ನಿವಾರಣೆಗೆ ಸರ್ಕಾರ ಮುಂದಾಗಿದೆ.
ಭೂಗಳ್ಳರು ಮತ್ತು ಸಣ್ಣ ಕೃಷಿಕರಿಗೆ ಸಮಾನ ಶಿಕ್ಷೆಯನ್ನು ನಿವಾರಣೆ ಮಾಡಿ ಭೂ ಒತ್ತುವರಿ ಮತ್ತು ಭೂಕಬಳಿಕೆ ಪ್ರತ್ಯೇಕಗೊಳಿಸಿ ರೈತರ ರಕ್ಷಣೆಗಾಗಿ ಕಾನೂನಿಗೆ ತಿದ್ದುಪಡಿ ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ.
ಸಾಗುವಳಿದಾರರ ರಕ್ಷಣೆಗೆ ಸರ್ಕಾರ ಕ್ರಮ ಕೈಗೊಂಡಿದ್ದು, ಒತ್ತುವರಿ ಮತ್ತು ಭೂಕಬಳಿಕೆ ಪ್ರತ್ಯೇಕ ಮಾಡಲಾಗುವುದು. ಜೀವನ ನಡೆಸಲು ಒತ್ತುವರಿ ಮಾಡಿಕೊಂಡಿರುವ ಮತ್ತು ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಮೌಲ್ಯದ ಭೂಕಬಳಿಕೆ ಮಾಡುವ ಆರೋಪಿಗಳನ್ನು ಒಂದೇ ಕಾನೂನಿನಡಿ ಶಿಕ್ಷಿಸುವುದನ್ನು ತಪ್ಪಿಸಲು ಒತ್ತುವರಿ ಮತ್ತು ಭೂಕಬಳಿಕೆ ಪ್ರತ್ಯೇಕಗೊಳಿಸಲು ಕಾನೂನು ತಿದ್ದುಪಡಿಗೆ ಸರ್ಕಾರ ಕ್ರಮ ಕೈಗೊಂಡಿದೆ.
ಇದಕ್ಕಾಗಿ ಕಂದ ಭೂ ಕಂದಾಯ ಕಾಯ್ದೆ ಸೆಕ್ಷನ್ 192(ಎ) ಗೆ ತಿದ್ದುಪಡಿ ಮಾಡಿ ಭೂಕಬಳಿಕೆಯಿಂದ ಪಾರಂಪರಿಕ ಒತ್ತುವರಿಯನ್ನು ಪ್ರತ್ಯೇಕಗೊಳಿಸಲಾಗುವುದು ಎಂದು ಹೇಳಲಾಗಿದೆ.