alex Certify ಸತ್ತ ವ್ಯಕ್ತಿಯ ಹೆಸರಲ್ಲಿ ದಾಖಲಾಗಿತ್ತು ದೂರು…! ಪ್ರಕರಣ ವಿಚಾರಣೆಗೆ ಬಂದಾಗ ನ್ಯಾಯಾಧೀಶರಿಗೆ ‘ಅಚ್ಚರಿ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸತ್ತ ವ್ಯಕ್ತಿಯ ಹೆಸರಲ್ಲಿ ದಾಖಲಾಗಿತ್ತು ದೂರು…! ಪ್ರಕರಣ ವಿಚಾರಣೆಗೆ ಬಂದಾಗ ನ್ಯಾಯಾಧೀಶರಿಗೆ ‘ಅಚ್ಚರಿ’

ಸತ್ತ ವ್ಯಕ್ತಿಯೊಬ್ಬ ನ್ಯಾಯಕ್ಕಾಗಿ ಅರ್ಜಿ ಸಲ್ಲಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. 2014ರ ಭೂ ವಿವಾದ ಪ್ರಕರಣದಲ್ಲಿ ಮೃತ ವ್ಯಕ್ತಿಯೊಬ್ಬರು ದಾಖಲಿಸಿದ್ದ ಎಫ್‌ಐಆರ್ ಅನ್ನು ಅಲಹಾಬಾದ್ ಹೈಕೋರ್ಟ್ ರದ್ದುಗೊಳಿಸಿದೆ. ಖುಷಿನಗರದ ಈ ಪ್ರಕರಣ ನ್ಯಾಯಾಂಗ ಹಾಗೂ ಸಾರ್ವಜನಿಕರನ್ನು ಗೊಂದಲಕ್ಕೀಡು ಮಾಡಿತ್ತು.

2011ರಲ್ಲಿ ನಿಧನರಾದ ಶಬ್ದ ಪ್ರಕಾಶ್ ಎಂಬುವರು 2014ರಲ್ಲಿ ಒಂದೇ ಕುಟುಂಬದ ಐವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ತನಿಖಾಧಿಕಾರಿ ಹೇಳಿಕೆಗಳನ್ನು ದಾಖಲಿಸಿಕೊಂಡು, ಆರೋಪಪಟ್ಟಿ ಸಲ್ಲಿಸಿದ್ದರಿಂದ ಪ್ರಕರಣ ಕೋರ್ಟ್‌ ಮೆಟ್ಟಿಲೇರಿತ್ತು. ಪ್ರಕರಣವು ಅಲಹಾಬಾದ್ ಹೈಕೋರ್ಟ್‌ಗೆ ತಲುಪಿದಾಗ ಸತ್ಯ ಬಯಲಾಗಿದೆ.

ನ್ಯಾಯಮೂರ್ತಿ ಸೌರಭ್ ಶ್ಯಾಮ್ ಶಂಶೇರಿ, ಈ ವಿಷಯದ ಬಗ್ಗೆ ಕುಶಿನಗರದ ಪೊಲೀಸ್ ವರಿಷ್ಠಾಧಿಕಾರಿಯನ್ನು ಪ್ರಶ್ನಿಸಿದ್ದಾರೆ. ಸತ್ತ ವ್ಯಕ್ತಿ ಎಫ್‌ಐಆರ್‌ ದಾಖಲಿಸುವುದು ಹೇಗೆ ಎಂದು ಕೋರ್ಟ್‌ ವಿಚಾರಿಸಿದೆ.

ಆರೋಪಿ ಪುರುಷೋತ್ತಮ್ ಸಿಂಗ್, ಶಬ್ದ ಪ್ರಕಾಶ್ ಪತ್ನಿ ಮಮತಾ ಸಲ್ಲಿಸಿದ ಮರಣ ಪ್ರಮಾಣಪತ್ರವನ್ನು ಕೋರ್ಟ್‌ ಗೆ ಹಾಜರುಪಡಿಸಿದ್ದರು.

ತನಿಖಾಧಿಕಾರಿ, ಮೃತ ವ್ಯಕ್ತಿ ಹೇಳಿಕೆಯನ್ನು ಪಡೆದಿದ್ದಲ್ಲದೆ, 2023 ರಲ್ಲಿ  ಅಫಿಡವಿಟ್‌ಗೆ ಸತ್ತ ವ್ಯಕ್ತಿಯ ಸಹಿ ಇದೆ. ಪ್ರಕರಣವನ್ನು ಪರಿಶೀಲಿಸಿದ ನ್ಯಾಯಾಲಯವು ಪುರುಷೋತ್ತಮ್ ಸಿಂಗ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧದ ಆರೋಪಪಟ್ಟಿಯನ್ನು ರದ್ದುಗೊಳಿಸಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಕುಶಿನಗರದ ಎಸ್ಪಿಗೆ ಆದೇಶಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...