ಬೆಂಗಳೂರು: ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಬಳಸಿಕೊಳ್ಳಲು ಭೂ ಪರಿವರ್ತನೆಗೆ ಇನ್ನುಮುಂದೆ ವರ್ಷಗಟ್ಟಲೆ ಕಾಯುವ ಅಗತ್ಯವಿರುವುದಿಲ್ಲ. ಮೂರು ದಿನಗಳ ಅವಧಿಯಲ್ಲಿ ಅರ್ಜಿದಾರರಿಗೆ ಭೂ ಪರಿವರ್ತನೆ ಮಾಡಿಸಿಕೊಳ್ಳುವ ವ್ಯವಸ್ಥೆ ಜಾರಿಗೆ ಬರಲಿದೆ.
ಕಚೇರಿಗಳಿಗೆ ಅಲೆದಾಟ ತಪ್ಪಿಸಲು ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಜಿಲ್ಲಾಧಿಕಾರಿಗಳಿಗೆ ನೇರ ಹೊಣೆ ನೀಡಲಾಗುತ್ತದೆ. ಕೃಷಿಭೂಮಿಯನ್ನು ಕೈಗಾರಿಕೆ, ವಸತಿ, ವಾಣಿಜ್ಯ ಮೊದಲಾದ ಕೃಷಿಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲು ಭೂಪರಿವರ್ತನೆ ಮಾಡಿಕೊಳ್ಳಬೇಕಿತ್ತು. ಇದು ಸುಲಭದ ಕೆಲಸವಲ್ಲ, ವರ್ಷಗಟ್ಟಲೆ ಅಲೆದಾಡಬೇಕಿದ್ದು, ಇದನ್ನು ತಪ್ಪಿಸಲು ಸರಳ ದಾಖಲೆಗಳೊಂದಿಗೆ ಮೂರು ದಿನದೊಳಗೆ ಭೂಪರಿವರ್ತನೆ ಮಾಡಿಕೊಡುವ ವ್ಯವಸ್ಥೆ ಜಾರಿ ತರಲಾಗುತ್ತಿದೆ ಎಂದು ಹೇಳಲಾಗಿದೆ.