ಲಲಿತಾ ಸಹಸ್ರನಾಮವನ್ನು ಓದುವಾಗ ನೀವು ಗುಡಾನ್ನ ಪ್ರೀತ ಮಾನಸ ಎಂಬ ಸಾಲು ಗಮನಿಸಿರಬಹುದು. ಗುಡಾ ಎಂದರೆ ಬೆಲ್ಲ. ಪಾರ್ವತಿಗೆ ಬೆಲ್ಲದಿಂದ ಮಾಡಿದ ಸಿಹಿ ತಿನಿಸು ಬಹಳ ಇಷ್ಟ. ಬೆಲ್ಲದ ಅನ್ನ ಅಂದರೆ ಸಿಹಿ ಪೊಂಗಲ್ ದೇವಿಯ ಇಷ್ಟದ ನೈವೇದ್ಯ. ಈ ನವರಾತ್ರಿಯಲ್ಲಿ ದೇವಿಗೆ ಬೆಲ್ಲದ ಖಾದ್ಯಗಳನ್ನೆ ಹೆಚ್ಚಾಗಿ ಮಾಡಿ ನೈವೇದ್ಯ ಮಾಡಿ.
ಸಂಜೆಯ ಸಮಯದಲ್ಲಿ ಬೆಲ್ಲದಿಂದ ಮಾಡಿದ ಭಕ್ಷ್ಯವನ್ನು ತಯಾರಿಸಿ 10 ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ಕೊಡಿ.
ನವರಾತ್ರಿಯಲ್ಲಿ ಕನ್ಯಾಕುಮಾರಿಯರಿಗೆ ಅಂದರೆ ಇನ್ನೂ ಮೈ ನೆರೆಯದ ಹೆಣ್ಣು ಮಕ್ಕಳಿಗೆ ಸಿಹಿತಿನಿಸು, ಅಲಂಕಾರದ ಸಾಮಗ್ರಿಗಳು, ಆಟಿಕೆ ಕೊಡುವುದರಿಂದ ದೇವಿ ಆ ಮಕ್ಕಳ ರೂಪದಲ್ಲಿ ಆಗಮಿಸಿ, ಸಂತುಷ್ಟಗೊಂಡು ಹರಸುತ್ತಾಳೆ.