ಬೆಂಗಳೂರು : ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ನಡೆಯುತ್ತಿರುವ ಫ್ಲವರ್ ಶೋಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿವಿಧ ಕಡೆಗಳಿಂದ ಬಂದ ಜನರು, ವಿದ್ಯಾರ್ಥಿಗಳು ವಿವಿಧ ರೀತಿಯ ಹೂಗಳನ್ನು ನೋಡಿ ಎಂಜಾಯ್ ಮಾಡಿದ್ದಾರೆ. ವಿವಿಧ ರೀತಿಯ ಹೂವುಗಳನ್ನು ವೀಕ್ಷಣೆ ಮಾಡಿ ಸಾರ್ವಜನಿಕರು ಸಂತೋಷಪಟ್ಟಿದ್ದಾರೆ.
ಆಗಸ್ಟ್ 04 ರಂದು ಫ್ಲವರ್ ಶೋಗೆ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದರು. ಇನ್ನೆರಡು ದಿನ ಅಂದರೆ ಇಂದು ಮತ್ತು ನಾಳೆ ಮಾತ್ರ ಫ್ಲವರ್ ಶೋ ಇರಲಿದೆ. ಆಗಸ್ಟ್ 15 ರಂದು ನಾಳೆ ಫ್ಲವರ್ ಶೋ ವೀಕ್ಷಣೆಗೆ ತೆರೆಬೀಳಲಿದೆ.
76 ನೇ ಸ್ವತಂತ್ರ ಮಹೋತ್ಸವದ ಹಿನ್ನೆಲೆಯಲ್ಲಿ 214 ನೇ ಫ್ಲವರ್ ಶೋ ಆಯೋಜನೆ ಮಾಡಲಾಗಿದ್ದು, ವಿಧಾನಸೌಧ ಹಾಗೂ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಪರಿಕಲ್ಪನೆಯಲ್ಲಿ ಈ ವರ್ಷದ ಫ್ಲವರ್ ಶೋ ಮೂಡಿ ಬಂದಿದೆ. ಇನ್ನು 8 ಲಕ್ಷದಷ್ಟು ಹೂಗಳನ್ನು ರಾಜ್ಯದ ವಿವಿಧ ಭಾಗಗಳಿಂದ ಹಾಗೂ ನಂದಿಗಿರಿಧಾಮ, ಕೆಮ್ಮಣ್ಣುಗುಂಡಿ ಗಿರಿಧಾಮ, ತಮಿಳುನಾಡು, ಆಂಧ್ರಪ್ರದೇಶ, ಊಟಿಯಿಂದ ತರಿಸಲಾಗಿದೆ.