ಆಸ್ತಿ-ಸಂಪತ್ತು ಗಳಿಕೆಗಾಗಿ ಜನರು ದಿನನಿತ್ಯ ಕೆಲಸ ಮಾಡ್ತಾರೆ. ಧನ-ಸಂಪತ್ತು, ತಾಯಿ ಮಹಾಲಕ್ಷ್ಮಿ ಕೃಪೆಗೆ ಪಾತ್ರರಾದವರಿಗೆ ಮಾತ್ರ ಲಭ್ಯವಾಗುತ್ತದೆ.
ತಾಯಿ ಪ್ರಸನ್ನಳಾಗಲು ನಿಯಮಿತ ರೂಪದಲ್ಲಿ ಕೆಲವೊಂದು ಕೆಲಸಗಳನ್ನು ಮಾಡುತ್ತ ಬರಬೇಕಾಗುತ್ತದೆ.
ಪ್ರತಿ ಹುಣ್ಣಿಮೆಯಂದು ಖೀರ್ ತಯಾರಿಸಿ ಮಹಾಲಕ್ಷ್ಮಿಗೆ ಅರ್ಪಿಸಬೇಕು. ನಂತ್ರ ಮನೆಯ ಸದಸ್ಯರೆಲ್ಲ ಒಂದಾಗಿ ಸೇವನೆ ಮಾಡಬೇಕು.
ತಾಯಿ ಧನಲಕ್ಷ್ಮಿಯ ಪೂಜೆಯನ್ನು ದಿನನಿತ್ಯ ಮಾಡಬೇಕು. ಬೆಳಿಗ್ಗೆ ಹಾಗೂ ಸಂಜೆ ಧನಲಕ್ಷ್ಮಿ ಫೋಟೋಕ್ಕೆ ಕುಂಕುಮ, ಅಕ್ಷತೆ, ಗಂಧ ಹಾಕಿ ಪೂಜೆ ಮಾಡಿ ಧೂಪ ಹಚ್ಚಬೇಕು. ಸ್ವಚ್ಛ ಮನಸ್ಸಿನಿಂದ ತಾಯಿಯ ಪೂಜೆ ಮಾಡಬೇಕು.
ಸೂರ್ಯಾಸ್ತದ ವೇಳೆ ಮನೆಯಲ್ಲಿ ಮೂರು ಬಾರಿ ಶಂಖ ಊದಿ.
ಪ್ರತಿದಿನ ದೇವಿ ಲಕ್ಷ್ಮಿ ಮುಂದೆ ತುಪ್ಪದ ದೀಪ ಹಚ್ಚಿ, ಗುಲಾಬಿ ಸುಗಂಧದ ಧೂಪ ಹಚ್ಚಿ, ಒಂದು ಗುಲಾಬಿ ಹೂವನ್ನು ಅರ್ಪಿಸಬೇಕು.
ಭಾನುವಾರ ಹಾಗೂ ಮಂಗಳವಾರ ಉಪ್ಪಿಲ್ಲದ ಆಹಾರ ಸೇವನೆ ಮಾಡಿದ್ರೆ ತಾಯಿ ಲಕ್ಷ್ಮಿ ಪ್ರಸನ್ನಳಾಗ್ತಾಳೆ.