ಸುಮಾರು 10 ವರ್ಷಗಳಿಂದ ಬ್ಯಾಂಕ್ ಖಾತೆಯಿಂದ ಸಂಬಳ ತೆಗೆಯದ ಸ್ವೀಪರ್ ಧೀರಜ್ ಕಥೆ ನೆನಪಿರಬಹುದು. ದುರದೃಷ್ಟವಶಾತ್, ಕ್ಷಯರೋಗದಿಂದಾಗಿ ಭಾನುವಾರ ನಸುಕಿನಲ್ಲಿ ಆತ ಮೃತರಾಗಿದ್ದಾರೆ. ಆದರೆ, ಗಮನಿಸಬೇಕಾದ ಸಂಗತಿ ಎಂದರೆ ಆತನ ಬ್ಯಾಂಕ್ ಖಾತೆಯಲ್ಲಿ ಬರೋಬ್ಬರಿ 70 ಲಕ್ಷಕ್ಕೂ ಅಧಿಕ ಹಣ ಪತ್ತೆಯಾಗಿದೆ.
ಪ್ರಯಾಗರಾಜ್ನಲ್ಲಿರುವ ಆಸ್ಪತ್ರೆಯ ಕುಷ್ಠರೋಗ ವಿಭಾಗದಲ್ಲಿ ಸಫಾಯಿಕರ್ಮಚಾರಿಯಾಗಿದ್ದ ಧೀರಜ್ಗೆ ಅವರ ತಂದೆಯ ಕೆಲಸವೇ ಸಿಕ್ಕಿತ್ತು. ತಂದೆ ಕೂಡ ಅದೇ ಆಸ್ಪತ್ರೆಯಲ್ಲಿ ಸ್ವೀಪರ್ ಆಗಿದ್ದರು. ಅವರ ಮರಣದ ನಂತರ ಧೀರಜ್ಗೆ ಕೆಲಸ ಸಿಕ್ಕಿತ್ತು.
ವಿಚಿತ್ರ ಕಾರಣಗಳಿಗಾಗಿ ತಂದೆ ಮತ್ತು ಮಗ ಇಬ್ಬರೂ ತಮ್ಮ ವೇತನದ ಖಾತೆಯಿಂದ ಯಾವುದೇ ಹಣವನ್ನು ಹಿಂಪಡೆದಿರಲಿಲ್ಲ. ತಂದೆಯಂತೆ ಧೀರಜ್ ಕೂಡ ಭಿಕ್ಷೆ ಬೇಡುತ್ತಾ ಬದುಕುತ್ತಿದ್ದ. ಅವರ 80 ವರ್ಷದ ತಾಯಿ ಕೂಡ ಪ್ರತಿ ತಿಂಗಳು ಪಿಂಚಣಿ ಪಡೆಯುತ್ತಿದ್ದರು.
ಕೆಲವು ತಿಂಗಳ ಹಿಂದೆ ಕೆಲವು ಅಧಿಕಾರಿಗಳು ಧೀರಜ್ ಹಣದ ಬಗ್ಗೆ ವಿಚಾರಿಸಲು ಸಹ ಬಂದಿದ್ದರು. ಇನ್ನು ಭಯದಿಂದ ಆತ ಮದುವೆಯಾಗಿರಲಿಲ್ಲ. ಅವರು ಪ್ರತಿ ವರ್ಷ ಆದಾಯ ತೆರಿಗೆ ರಿಟರ್ನ್ ಅನ್ನು ಸಹ ಸಲ್ಲಿಸುತ್ತಿದ್ದರು ಎಂದು ಆತನ ಸ್ನೇಹಿತ ಹೇಳಿದ್ದಾರೆ.