alex Certify ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣ; ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆಗಳ ಸುರಿಮಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣ; ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆಗಳ ಸುರಿಮಳೆ

ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣ ಸಂಬಂಧ ನೂರಾರು ಮಂದಿ ರ್ಯಲಿಯಲ್ಲಿ ಭಾಗಿಯಾಗಿದ್ದರೂ ಸಹ ಬೆರಳೆಣಿಕೆಯಷ್ಟು ಸಾಕ್ಷಿದಾರರು ಮಾತ್ರ ಇರೋದು ಏಕೆ ಎಂದು ಸುಪ್ರೀಂಕೋರ್ಟ್​ ಉತ್ತರ ಪ್ರದೇಶ ಸರ್ಕಾರವನ್ನು ಪ್ರಶ್ನಿಸಿದೆ. ಪ್ರಕರಣ ಸಂಬಂಧ ಸ್ವಯಂಪ್ರೇರಿತ ವಿಚಾರಣೆ ನಡೆಸುತ್ತಿರುವ ಕೋರ್ಟ್​ ಈ ಪ್ರಶ್ನೆಯನ್ನು ಕೇಳಿದೆ.

ಉತ್ತರ ಪ್ರದೇಶ ಸರ್ಕಾರದ ಪರವಾಗಿ ಕೋರ್ಟ್​ ಎದುರು ಹಾಜರಾದ ಹಿರಿಯ ವಕೀಲ ಹರೀಶ್​ ಸಲ್ವೆ, ಎನ್​ವಿ ರಮಣ ನೇತೃತ್ವದ ಪೀಠದ ಎದುರು ವಾದ ಮಂಡಿಸಿದ್ದು, ಒಟ್ಟು 68 ಸಾಕ್ಷಿದಾರರಲ್ಲಿ, 30 ಸಾಕ್ಷಿದಾರರ ಹೇಳಿಕೆಗಳನ್ನು ದಾಖಲಿಸಲಾಗಿದೆ. ಈ 23 ಮಂದಿ ಘಟನೆಯ ಪ್ರತ್ಯಕ್ಷದರ್ಶಿಗಳು ಎಂದು ಹೇಳಿಕೊಂಡಿದ್ದಾರೆ ಅಂತಾ ಹೇಳಿದ್ರು.

ಕೊರೊನಾ ಸಾಂಕ್ರಾಮಿಕದ ಬಳಿಕ ಸ್ಮಾರ್ಟ್​ಫೋನ್​ ಮಾರುಕಟ್ಟೆಯಲ್ಲಾಗಿದೆ ಈ ಮಹತ್ವದ ಬದಲಾವಣೆ….!

ನೂರಾರು ಮಂದಿ ರ್ಯಲಿಯಲ್ಲಿ ಭಾಗಿಯಾಗಿದ್ದರೂ ಸಹ ಕೇವಲ 23 ಮಂದಿ ಪ್ರತ್ಯಕ್ಷದರ್ಶಿಗಳು ಮಾತ್ರ ಇಲ್ಲಿದ್ದಾರೆ ಎಂದು ಕೋರ್ಟ್​ ಪ್ರಶ್ನಿಸಿದೆ. ಈ ಪ್ರಶ್ನೆಗೆ ಉತ್ತರಿಸಿದ ರಾಜ್ಯ ಸರ್ಕಾರ, ಜನರು ಕಾರನ್ನು ಹಾಗೂ ಕಾರಿನೊಳಗಿದ್ದ ಜನರನ್ನು ನೋಡಿದ್ದಾರೆ. ಪ್ರೇಕ್ಷಕರಿಗಿಂತ ಪ್ರತ್ಯಕ್ಷದರ್ಶಿಗಳು ಸಾಕ್ಷಿ ಹೆಚ್ಚು ಪ್ರಮುಖವಾಗಿದೆ ಎಂದು ಹೇಳಿದೆ.

ಸುಪ್ರೀಂಕೋರ್ಟ್​ ನ್ಯಾಯಪೀಠವು ಲಖೀಂಪುರ ಖೇರಿ ಪ್ರಕರಣದಲ್ಲಿ ಸಾಕ್ಷಿಗಳನ್ನು ರಕ್ಷಿಸುವಂತೆ ಆದೇಶಿಸಿದೆ ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ತ್ವರಿತವಾಗಿ ದಾಖಲಿಸುವಂತೆ ಉತ್ತರ ಪ್ರದೇಶ ಪೊಲೀಸರಿಗೆ ಸೂಚನೆ ನೀಡಿದೆ. ಹಾಗೂ ವಿಚಾರಣೆಯನ್ನು ನವೆಂಬರ್​ 8ಕ್ಕೆ ಮುಂದೂಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...