ಜನರು ತಮ್ಮ ಹಣವನ್ನು ಬ್ಯಾಂಕಿನಲ್ಲಿ ಇಡ್ತಾರೆ. ಬ್ಯಾಂಕ್ ನಲ್ಲಿ 7 ವರ್ಷದ ನಂತ್ರ ನೀವಿಟ್ಟ ಹಣ ದುಪ್ಪಟ್ಟಾಗಬಹುದು. ಆದರೆ ಲಖಿಂಪುರ್ ಖೇರಿಯಲ್ಲಿ ರೈತನೊಬ್ಬ, ಹಣವನ್ನು ಭೂಮಿಗೆ ಹಾಕಿ, 7 ವರ್ಷಗಳಲ್ಲಿ 4 ಪಟ್ಟು ಹಣ ಗಳಿಸಿದ್ದಾನೆ.
ಖೇರಿ ಜಿಲ್ಲೆಯ ಈ ವಿದ್ಯಾವಂತ ರೈತ ಸಾಂಪ್ರದಾಯಿಕ ಕೃಷಿಯಿಂದ ಬಿದಿರು ಕೃಷಿಗೆ ಬದಲಾಗುವ ಮೂಲಕ ಜಿಲ್ಲೆಯ ಇತರ ರೈತರಿಗೆ ಮಾದರಿಯಾಗಿದ್ದಾರೆ. ಸುರೇಶ್ ಚಂದ್ರ ವರ್ಮಾ, ಉತ್ತಮ ಬಿದಿರು ತಳಿ ಬೆಳೆದಿದ್ದಾರೆ. ಇದ್ರ ಜೊತೆ ಕಬ್ಬು ಬೆಳೆ ಬೆಳೆಯವ ಮೂಲಕ ಉತ್ತಮ ಲಾಭ ಗಳಿಸಿದ್ದಾರೆ.
ಸಾಕೇತು ಗ್ರಾಮದ ನಿವಾಸಿ ಸುರೇಶ್ ಚಂದ್ರ ವರ್ಮಾ, ಒಬ್ಬ ವಿದ್ಯಾವಂತ ರೈತ. ಬಿಎ, ಎಲ್‌ಎಲ್‌ಬಿ ಮಾಡಿದ ಸುರೇಶ್ ಚಂದ್ರ ವರ್ಮಾ, ಕೃಷಿ ಭೂಮಿ ಹೊಂದಿದ್ದಾರೆ. 65 ನೇ ವಯಸ್ಸಿನಲ್ಲಿಯೂ ಕೃಷಿಯಲ್ಲಿ ಹೊಸ ಪ್ರಯೋಗಗಳನ್ನು ಮಾಡುವ ಸುರೇಶ್ ಉತ್ಸಾಹ ಕಡಿಮೆಯಾಗಿಲ್ಲ. ಕಬ್ಬು, ಭತ್ತ ಮತ್ತು ಗೋಧಿಯ ಸಾಂಪ್ರದಾಯಿಕ ಕೃಷಿಯಿಂದ ಭಿನ್ನವಾಗಿ ಏನನ್ನಾದರೂ ಮಾಡಬೇಕೆಂದುಕೊಂಡಿದ್ದ ಸುರೇಶ್, ಬಿದುರಿಗೆ ಕೈ ಹಾಕಿದರು. ಮಾವು, ನೆಲ್ಲಿಕಾಯಿ, ಲಿಚ್ಚಿ ಮತ್ತು ನಿಂಬೆ ಗಿಡಗಳನ್ನೂ ಬೆಳೆಸಿದ್ದಾರೆ. ಕಬ್ಬಿನ ಜೊತೆಯಲ್ಲಿ ಬಿದಿರು ಕೃಷಿಯ ಹೊಸ ಪ್ರಯೋಗವನ್ನು ಆರಂಭಿಸಿ, ಕೈತುಂಬ ಹಣ ಗಳಿಸಿದ್ದಾರೆ.
ಪಂತನಗರ ಕೃಷಿ ವಿಶ್ವವಿದ್ಯಾಲಯದಿಂದ 25 ರೂಪಾಯಿಗೆ ಒಂದು ಸಸಿಯಂತೆ 234 ಸಸಿಗಳನ್ನು ತಂದ ಸುರೇಶ್, ಒಂದು ಎಕರೆ ಪ್ರದೇಶದಲ್ಲಿ ಬಿದಿರು ಬೆಳೆಸಿದ್ದರು. ನಾಲ್ಕು ವರ್ಷಗಳಲ್ಲಿ ಒಂದು ಗಿಡದಲ್ಲಿ ಇಪ್ಪತ್ತರಿಂದ 22 ಬಿದಿರು ಬಂದಿದೆ. ಒಂದು ಬಿದಿರು ಗಿಡದಿಂದ 40 ರಿಂದ 50 ಬಿದಿರುಗಳು ಬರುವ ನಿರೀಕ್ಷೆಯಿದೆ. ಒಂದು ಬಿದಿರು, ಗ್ರಾಮದಲ್ಲೇ 150 ರೂಪಾಯಿಗೆ ಗೆ ಮಾರಾಟ ಮಾಡಲಾಗುತ್ತಿದೆ. 234 ಗಿಡಗಳಲ್ಲಿ 50-50 ಬಿದಿರುಗಳು ಹೊರಬಂದರೆ, 11700 ಬಿದಿರುಗಳು ಬರುತ್ತವೆ. ಅಂದ್ರೆ 17.55 ಲಕ್ಷ ರೂಪಾಯಿ ಲಾಭ ಬರುತ್ತದೆ ಎಂದು ಸುರೇಶ್ ಹೇಳಿದ್ದಾರೆ.