
ಯಾದಗಿರಿ: ಯಾದಗಿರಿ ಜಿಲ್ಲೆ ಬಾಚವಾರ ಗ್ರಾಮದ ಹೊರವಲಯದ ಕೆರೆಯಲ್ಲಿ ಯುವಕರಿಬ್ಬರು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.
ಮಾರ್ತಾಂಡಪ್ಪ(19), ಸಾಹೇಬಣ್ಣ(18) ಮೃತಪಟ್ಟವರು. ಸ್ನೇಹಿತರೊಂದಿಗೆ ಸೇರಿ ಹೋಳಿ ಆಡಿದ ನಂತರ ಇವರು ಸ್ನಾನ ಮಾಡಲು ಗ್ರಾಮದ ಹೊರವಲಯದಲ್ಲಿದ್ದ ಕೆರೆಗೆ ಹೋಗಿದ್ದಾರೆ. ಕೆರೆಯಲ್ಲಿ ಸ್ನಾನ ಮಾಡುವ ವೇಳೆ ಈಜು ಬಾರದ ಇವರಿಬ್ಬರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆನ್ನಲಾಗಿದೆ. ಹುಡುಕಾಟದ ನಂತರ ಸಾಹೇಬಣ್ಣ ಮೃತದೇಹ ಪತ್ತೆಯಾಗಿದೆ. ಮಾರ್ತಾಂಡಪ್ಪ ಮೃತದೇಹಕ್ಕಾಗಿ ಹುಡುಕಾಟ ನಡೆದಿದೆ. ಯಾದಗಿರಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ ಎಂದು ಹೇಳಲಾಗಿದೆ.