
ಬಳ್ಳಾರಿ: ಶಿವಪುರದ ಕೆರೆಯಲ್ಲಿ ಮುಳುಗಿ ಇಬ್ಬರು ನೀರು ಪಾಲಾಗಿದ್ದಾರೆ. ಬಳ್ಳಾರಿ ಜಿಲ್ಲೆ ಸಂಡೂರಿನಲ್ಲಿರುವ ಐತಿಹಾಸಿಕ ಶಿವಪುರ ಕೆರೆಯಲ್ಲಿ ದುರಂತ ಸಂಭವಿಸಿದೆ.
ದತ್ತಾತ್ರೇಯ(27), ನಾಗರಾಜ್(26) ಮೃತಪಟ್ಟವರು ಎಂದು ಹೇಳಲಾಗಿದೆ. ಈಜಲು ತೆರಳಿದ್ದ ವೇಳೆ ಕೆರೆಯಲ್ಲಿ ಮುಳುಗಿ ದುರ್ಮರಣಕ್ಕೀಡಾಗಿದ್ದಾರೆ. ಸಂಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.