ಕೋಲಾರ: ಚಿಂತಾಮಣಿ ತಾಲೂಕಿನ ಕೊಡಗೊಂಡ್ಲು ಗ್ರಾಮದ ಬಳಿ ಕೆರೆಯಲ್ಲಿ ಮುಳುಗಿ ಮೂವರು ಮೃತಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ.
ವೆಂಕಟೇಶ್ ಅವರ ಅವಳಿ ಮಕ್ಕಳಾದ ರಾಮ, ಲಕ್ಷ್ಮಣ್ ಮತ್ತು ಮುನಿರಾಜು ಅವರ ಪುತ್ರ ಪ್ರಜ್ವಲ್ ಮೃತಪಟ್ಟವರು ಎಂದು ಹೇಳಲಾಗಿದೆ.
ಚಿಂತಾಮಣಿ ತಾಲೂಕಿನಲ್ಲಿ ಧಾರಾಕಾರ ಮಳೆಯಾಗಿ 30 ವರ್ಷಗಳ ನಂತರ ಗ್ರಾಮದ ಕೆರೆ ತುಂಬಿದೆ. ಶಾಲೆಯಿಂದ ಮನೆಗೆ ಬಂದ ಮಕ್ಕಳು ಕೆರೆಯ ಸಮೀಪ ಆಟವಾಡಲು ಹೋಗಿದ್ದು, ಈ ವೇಳೆ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಸ್ಥಳೀಯರು ಮೃತ ದೇಹಗಳನ್ನು ಹೊರಗೆ ತೆಗೆದಿದ್ದಾರೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.