
ಬೆಂಗಳೂರು: ಪೊಲೀಸ್ ಚೌಕಿ ಒಳಗೆ ಇಟ್ಟಿದ್ದ ಮಹಿಳಾ ಪೊಲೀಸ್ ಅಧಿಕಾರಿಯ ಬ್ಯಾಗನ್ನೇ ಕದ್ದು ಕಳ್ಳರು ಕೈಚಳಕ ತೋರಿದ್ದಾರೆ.
ಬೆಂಗಳೂರಿನ ಅಭಿನಯ ಜಂಕ್ಷನ್ ನಲ್ಲಿರುವ ಪೊಲೀಸ್ ಚೌಕಿಯೊಳಗೆ ಇಟ್ಟಿದ್ದ ಮಹಿಳಾ ಪೊಲೀಸ್ ಅಧಿಕಾರಿಯ ಬ್ಯಾಗ್ ಅನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ.
ಕರ್ತವ್ಯಕ್ಕೆ ಹಾಜರಾಗಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ ತಮ್ಮ ಬ್ಯಾಗನ್ನು ಪೊಲೀಸ್ ಚೌಕಿ ಒಳಗೆ ಇಟ್ಟಿದ್ದರು. ಬ್ಯಾಗ್ ನಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಕೊಟ್ಟಿದ್ದ ಬಾಡಿ ವೋರ್ನ್ ಕ್ಯಾಮರಾವನ್ನು ಇಟ್ಟಿದ್ದರು. ಬಳಿಕ ಸಂಚಾರ ದಟ್ಟಣೆ ನಿಯಂತ್ರಿಸಲು ಚೌಕಿಯಿಂದ ಹೊರ ಹೋಗಿದ್ದರು. ಇದನ್ನು ಗಮನಿಸಿದ ಕಳ್ಳರು ಮಹಿಳಾ ಸಿಬ್ಬದಿಯ ಬ್ಯಾಗ್ ನನ್ನೇ ಕದ್ದಿದ್ದಾರೆ.
ಉಪ್ಪಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.