ಮಹಿಳಾ ಕಾನ್ಸ್ ಟೇಬಲ್ ಸಬ್ಇನ್ಸ್ ಪೆಕ್ಟರ್ ನನ್ನು ಭೀಕರವಾಗಿ ಹತ್ಯೆಮಾಡಿರುವ ಘಟನೆ ಮಧ್ಯಪ್ರದೇಶದ ರಾಜ್‌ಗಢದಲ್ಲಿ ನಡೆದಿದೆ.
ರಾಜ್‌ಗಢ ಪೊಲೀಸ್ ಇಲಾಖೆಯ ಸಬ್ ಇನ್ಸ್ ಪೆಕ್ಟರ್ (ಎಸ್‌ಐ) ದೀಪಂಕರ್ ಗೌತಮ್ ನ ಹತ್ಯೆ ಮಾಡಲಾಗಿದ್ದು ಅವರ ಹತ್ಯೆಯ ಭೀಕರ ವೀಡಿಯೊ ಹೊರಬಿದ್ದಿದೆ. ಪೊಲೀಸ್ ಪೇದೆ ಪಲ್ಲವಿ ಸೋಲಂಕಿ ಮತ್ತು ಆಕೆಯ ಗೆಳೆಯ ಕರಣ್ ಠಾಕೂರ್ ಹತ್ಯೆ ನಡೆಸಿದ ಉದ್ದೇಶವನ್ನು ವಿಡಿಯೋ ಸ್ಪಷ್ಟವಾಗಿ ತೋರಿಸುತ್ತದೆ.
ಇಬ್ಬರೂ ಕಾರ್ ನಲ್ಲಿ ಗಂಟೆಗೆ 120 ಕಿಲೋಮೀಟರ್ ವೇಗದಲ್ಲಿ ಬಂದು ದೀಪಂಕರ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ. ಕಾರಿನೊಂದಿಗೆ ಸಬ್ ಇನ್ಸ್ ಪೆಕ್ಟರ್ ನನ್ನು ಸ್ವಲ್ಪ ದೂರ ಎಳೆದೊಯ್ದಿದ್ದರು. ಈ ದುರ್ಘಟನೆಯ ಜೋರಾದ ಶಬ್ದ ಕೇಳಿ ಅಕ್ಕಪಕ್ಕದಲ್ಲಿದ್ದವರು ಗಾಬರಿಗೊಂಡು ಸ್ಥಳಕ್ಕೆ ಧಾವಿಸಿದ್ದರು.
ಸೆಪ್ಟೆಂಬರ್ 10 ರಂದು ಮಧ್ಯಾಹ್ನ ಪಚೋರ್ ಪೊಲೀಸ್ ಠಾಣೆಯ ಮಹಿಳಾ ಪೇದೆ ಪಲ್ಲವಿ ಸೋಲಂಕಿ ಎಸ್‌ಐ ದೀಪಂಕರ್ ಗೌತಮ್ ಅವರನ್ನು ಭೇಟಿಯಾಗಲು ಕರೆದರು. ದೀಪಂಕರ್ ಗೌತಮ್ ಬೈಕ್ ನಲ್ಲಿ ಬಂದರು. ಬಿಯೋರಾದೇವಾಸ್ ಹೆದ್ದಾರಿಯಲ್ಲಿ ಎಸ್ ಐ ದೀಪಾಂಕರ್ ಗೌತಮ್, ಪಲ್ಲವಿ ಸೋಲಂಕಿ ಮತ್ತು ಆಕೆಯ ಪ್ರೇಮಿ ಕರಣ್ ಠಾಕೂರ್ ಅವರನ್ನು ನೋಡಿದರು. ಪಲ್ಲವಿ ಪ್ರೇಮಿ ಕರಣ್, ದೀಪಾಂಕರ್ ಗೆ ಬೆದರಿಕೆ ಹಾಕಿ ನಮ್ಮಿಬ್ಬರ ಸಂಬಂಧದಿಂದ ದೂರ ಇರುವಂತೆ ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಎಚ್ಚರಿಸಿದ. ಏನಾದರೂ ಅಹಿತಕರ ಘಟನೆ ಸಂಭವಿಸಬಹುದೆಂದು ಶಂಕಿಸಿದ ದೀಪಂಕರ್ ಅಲ್ಲಿಂದ ಬೈಕ್ ನಲ್ಲಿ ತಕ್ಷಣವೇ ಹೊರಡಿ ತಮ್ಮ ಸ್ನೇಹಿತ ಸುಭಾಷ್ ಗೆ ಕರೆ ಮಾಡಿ ಬರುವಂತೆ ತಿಳಿಸಿದ್ದಾರೆ. ದೀಪಂಕರ್ ನ ಸೂಚನೆಯಂತೆ ಸುಭಾಷ್ ಹೊರಟಿದ್ದರು.
ದೀಪಾಂಕರ್ ಅವರು ತಮ್ಮ ಬೈಕ್‌ನಲ್ಲಿ ಫಂಡಾ ಮಾರ್ಕೆಟ್ ಬಳಿ ಹೋಗುತ್ತಿದ್ದಾಗ, ಪಲ್ಲವಿ ಮತ್ತು ಕರಣ್ ಠಾಕೂರ್ ತಮ್ಮ ಅತಿವೇಗದ ಕಾರ್ ನಿಂದ ಬೈಕ್ ಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ದೀಪಾಂಕರ್ ಹಾರಿ ಕಾರಿನ ಮುಂದೆ ಬಿದ್ದಿದ್ದಾರೆ. ಇದಾದ ನಂತರ ಆರೋಪಿಗಳು ಕಾರನ್ನು ಅತಿವೇಗದಲ್ಲಿ ಚಲಾಯಿಸಿ ಗಾಯಾಳು ದೀಪಾಂಕರನ್ನು ಸ್ವಲ್ಪ ದೂರ ಎಳೆದೊಯ್ದಿದ್ದಾರೆ. ಈ ಅಪಘಾತದ ಭೀಕರತೆಯನ್ನು ಕಂಡು ಸುತ್ತಮುತ್ತಲಿನವರೂ ಬೆಚ್ಚಿಬಿದ್ದರು. ಈ ಸಂಪೂರ್ಣ ಘಟನೆಯು ಕೊಲೆಗಾರರ ನಿರ್ದಯ ಉದ್ದೇಶವನ್ನು ಬಯಲು ಮಾಡಿದೆ.
ಈ ಭೀಕರ ಘಟನೆ ನಡೆದ ಕೂಡಲೇ ಸ್ಥಳಕ್ಕೆ ಆಗಮಿಸಿದ ದೀಪಂಕರ ಸ್ನೇಹಿತ ಸುಭಾಷ್ ಗಂಭೀರವಾಗಿ ಗಾಯಗೊಂಡಿದ್ದ ದೀಪಂಕರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ದಾರಿಮಧ್ಯೆ ದೀಪಂಕರ್ ಸಾವನ್ನಪ್ಪಿದರು. ಈ ಘಟನೆಯು ಇಡೀ ಪ್ರದೇಶದಲ್ಲಿ ದುಃಖ ಮತ್ತು ಆಕ್ರೋಶದ ವಾತಾವರಣವನ್ನು ಸೃಷ್ಟಿಸಿತು. ಇದು ಪೊಲೀಸ್ ಇಲಾಖೆಗೆ ದೊಡ್ಡ ಶಾಕ್ ಆಗಿತ್ತು, ಏಕೆಂದರೆ ಕೊಲೆ ಮಾಡಿದವರು ಪೊಲೀಸ್ ಇಲಾಖೆಯೊಂದಿಗೆ ಸಂಬಂಧ ಹೊಂದಿದ್ದಾರೆ.
ಘಟನೆಯ ನಂತರ ಪಲ್ಲವಿ ಸೋಲಂಕಿ ಮತ್ತು ಕರಣ್ ಠಾಕೂರ್ ನೇರವಾಗಿ ಗ್ರಾಮಾಂತರ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದಾರೆ. ಪೊಲೀಸ್ ಠಾಣೆಗೆ ತೆರಳಿ ಎಸ್‌ಐ ದೀಪಂಕರ್‌ನನ್ನು ಕೊಂದಿರುವುದಾಗಿ ಹೇಳಿದ್ದಾರೆ. ಹೇಳಿಕೆಯ ನಂತರ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಇಬ್ಬರ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ. ಆರೋಪಿ ಕರಣ್ ಠಾಕೂರ್ ಮತ್ತು ಪಲ್ಲವಿ ಸೋಲಂಕಿ ವಿರುದ್ಧ ಸೆಕ್ಷನ್ 103 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.