ಕೆಲವು ಮಹಿಳೆಯರಿಗೆ ಜನನಾಂಗದಲ್ಲಿ ತುರಿಕೆ, ಕೆಟ್ಟ ವಾಸನೆ ಸಮಸ್ಯೆ ಇರುತ್ತದೆ. ಇದರಿಂದ ಕೆಲವು ಮಹಿಳೆಯರು ಕಿರಿಕಿರಿ ಅನುಭವಿಸುತ್ತಾರೆ. ಆ ಭಾಗದಲ್ಲಿ ಚಿಕ್ಕ ಚಿಕ್ಕ ಗುಳ್ಳೆಗಳು ಆಗುತ್ತದೆ. ಸರಿಯಾಗಿ ಆ ಭಾಗವನ್ನು ಕ್ಲೀನ್ ಮಾಡದಿದ್ದರೆ ಸಾಕಷ್ಟು ತೊಂದರೆಯನ್ನು ಅನುಭವಿಸಬೇಕಾಗುತ್ತದೆ.
ದೇಹದ ಖಾಸಗಿ ಭಾಗವನ್ನು ಸ್ವಚ್ಛ ಮಾಡಿಕೊಳ್ಳುವುದಕ್ಕೆ ಈ ಟಿಪ್ಸ್ ಫಾಲೋ ಮಾಡಿ.
ಜನನಾಂಗ ತುಂಬಾ ಸೂಕ್ಷ್ಮವಾಗಿರುವುದರಿಂದ ಇದನ್ನು ಸೋಪು, ಬಾಡಿ ವಾಶ್ ಇತ್ಯಾದಿಗಳನ್ನು ಉಪಯೋಗಿಸಿಕೊಂಡು ತೊಳೆಯಬಾರದು. ಇದರಿಂದ ಆ ಭಾಗ ಡ್ರೈ ಆಗುತ್ತದೆ. ಸ್ನಾನ ಮಾಡುವಾಗ ಉಗುರು ಬೆಚ್ಚಗಿನ ನೀರಿನಿಂದ ನಿಮ್ಮ ಜನನಾಂಗವನ್ನು ತೊಳೆದುಕೊಳ್ಳಿರಿ. ಯಾವುದೇ ಕೆಮಿಕಲ್ ಯುಕ್ತ ಸೋಪುಗಳನ್ನು ಬಳಸಬೇಡಿ.
ಬಟ್ಟೆಯಿಂದ ಜಾಸ್ತಿ ತಿಕ್ಕಬೇಡಿ. ತೆಳುವಾದ ಹತ್ತಿ ಬಟ್ಟೆಯಿಂದ ಅದನ್ನು ಒರೆಸಿಕೊಳ್ಳಿ. ಒರೆಸಿಕೊಳ್ಳುವ ಬಟ್ಟೆ ಕ್ಲೀನ್ ಆಗಿರಲಿ. ಹಾಗೇ ಕೈಯಲ್ಲಿ ಉಗುರುಗಳನ್ನು ಇಟ್ಟುಕೊಳ್ಳಬೇಡಿ. ಇದು ಆ ಭಾಗಕ್ಕೆ ತಾಕಿದರೆ ನಂಜಾಗುವ ಸಾಧ್ಯತೆ ಇರುತ್ತದೆ.
ಇನ್ನು ಪಿರಿಯೆಡ್ ಸಮಯದಲ್ಲಿ ನಿಮ್ಮ ಪ್ಯಾಡ್ ಅನ್ನು ಆಗಾಗ ಬದಲಾಯಿಸುತ್ತಾ ಇರಿ. ಇದರಿಂದ ಆ ಭಾಗದಲ್ಲಿ ಕೆಟ್ಟ ವಾಸನೆ ಬರುವುದು ತಪ್ಪುತ್ತದೆ.
ಅತಿ ಬಿಗಿಯಾದ ಒಳ ಉಡುಪುಗಳನ್ನು ಧರಿಸಬೇಡಿ. ಆ ಭಾಗದಲ್ಲಿ ಬೆವರುವ ಸಾಧ್ಯತೆ ಇರುತ್ತದೆ. ಒಳ ಉಡುಪುಗಳನ್ನು ಒಗೆದು ಬಿಸಿಲಿನಲ್ಲಿ ಒಣಗಿಸಿ.
ಇನ್ನು ಜನನಾಂಗಕ್ಕೆ ಯಾವುದೇ ಡಿಯೋಡರೆಂಟ್, ಪರ್ಫೂಮ್ ಗಳನ್ನು ಸ್ಪ್ರೆ ಮಾಡಿಕೊಳ್ಳಬೇಡಿ. ಅದು ಸೂಕ್ಷ್ಮಭಾಗವಾಗಿರುವುದರಿಂದ ಸಮಸ್ಯೆ ಎದುರಿಸಬೇಕಾಗುತ್ತದೆ.