
ಬೆಂಡೆಕಾಯಿಯಲ್ಲಿ ಸಾಕಷ್ಟು ಔಷಧಿ ಗುಣಗಳಿವೆ ಎಂಬುದನ್ನು ಈಗಾಗ್ಲೇ ನಾವು ನಿಮಗೆ ಹೇಳಿದ್ದೇವೆ. ಆರೋಗ್ಯ ವೃದ್ಧಿಗೆ ಬೆಂಡೆಕಾಯಿ ಸೇವನೆ ಒಳ್ಳೆಯದು. ಹಾಗೆ ಬೆಂಡೆಕಾಯಿಯನ್ನು ಸೌಂದರ್ಯವರ್ಧಕವಾಗಿಯೂ ಬಳಕೆ ಮಾಡಲಾಗುತ್ತದೆ.
ತುಂಬಾ ಸಮಯ ಬಿಸಿಲಿನಲ್ಲಿದ್ದಾಗ ನಮ್ಮ ಚರ್ಮ ಕಪ್ಪಾಗುತ್ತದೆ. ಇದರಿಂದ ನೆಮ್ಮದಿ ಪಡೆಯಬೇಕೆಂದಾದಲ್ಲಿ ಬೆಂಡೆಕಾಯಿ ಮಿಶ್ರಣವನ್ನು ಚರ್ಮಕ್ಕೆ ಹಚ್ಚಿಕೊಳ್ಳಬಹುದು.
ಬೆಂಡೆಕಾಯಿ ಒಳ್ಳೆಯ ಸ್ಕಿನ್ ಮಾಯಶ್ಚರೈಸರ್ ಆಗಿ ಕೆಲಸ ಮಾಡುತ್ತದೆ. ಮುಖದ ಸುಕ್ಕುಗಳನ್ನು ತೊಡೆದು ಹಾಕುವ ಗುಣ ಇದರಲ್ಲಿದೆ. ಬೆಂಡೆಕಾಯಿಯನ್ನು ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿಕೊಳ್ಳಿ. ಅದನ್ನು ಮುಖಕ್ಕೆ ಹಚ್ಚಿ ಸುಮಾರು 15-20 ನಿಮಿಷಗಳ ಕಾಲ ಬಿಡಿ. ನಂತ್ರ ಮುಖವನ್ನು ತೊಳೆಯಿರಿ.
ಬೆಂಡೆಕಾಯಿಯನ್ನು ಕತ್ತರಿಸಿ ಅರ್ಧ ಗಂಟೆ ನೀರಿನಲ್ಲಿ ನೆನೆಸಿಡಿ. ಹತ್ತಿ ಬಟ್ಟೆಯ ಸಹಾಯದಿಂದ ಆ ನೀರನ್ನು ಮುಖಕ್ಕೆ ಹಚ್ಚಿಕೊಳ್ಳಿ. ಮಿಶ್ರಣ ಒಣಗಿದ ನಂತ್ರ ಮುಖವನ್ನು ತೊಳೆಯಿರಿ. ಇದರಿಂದ ಚರ್ಮದ ಸಮಸ್ಯೆ ಕಡಿಮೆಯಾಗುತ್ತದೆ.
ಕೂದಲಿನ ಸೌಂದರ್ಯ ಹೆಚ್ಚಿಸಲೂ ಬೆಂಡೆಕಾಯಿ ಬಳಸಬಹುದು. ಬೆಂಡೆಕಾಯಿಯನ್ನು ಕತ್ತರಿಸಿ ಬಿಸಿ ನೀರಿನಲ್ಲಿ ನೆನೆಸಿಡಿ. ನೀರು ತಣ್ಣಗಾದ ನಂತ್ರ ಅರ್ಧ ನಿಂಬು ರಸವನ್ನು ಸೇರಿಸಿ. ಇದರಲ್ಲಿ ಕೂದಲನ್ನು ತೊಳೆಯಿರಿ. ಹೀಗೆ ಮಾಡಿದ್ರೆ ಕೂದಲು ಕಾಂತಿಯುತವಾಗುತ್ತದೆ.