ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ವಜ್ರದ ಕಲ್ಲುಗಳು ದೊರೆತ ನಂತರ ಇಬ್ಬರು ಗಣಿ ಕಾರ್ಮಿಕರು ಮಿಲಿಯನೇರ್ ಗಳಾಗಿದ್ದಾರೆ.
ಕೂಲಿ ಕಾರ್ಮಿಕರಿಗೆ ಜಮೀನುಗಳಲ್ಲಿ ಅಗೆಯುವ ಸಂದರ್ಭದಲ್ಲಿ ವಜ್ರದ ಕಲ್ಲುಗಳು ಸಿಕ್ಕಿದ್ದು ಇದರಿಂದಾಗಿ ಲಕ್ಷಾಧೀಶ್ವರರಾಗಿದ್ದಾರೆ ಎಂದು ವಜ್ರ ನಿರೀಕ್ಷಿಕ ಅನುಪಮ್ ಸಿಂಗ್ ತಿಳಿಸಿದ್ದಾರೆ. ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಜರೂಪುರದಲ್ಲಿ ದಿಲೀಪ್ ಮಿಸ್ತ್ರಿ ಅವರಿಗೆ 7.44 ಕ್ಯಾರೆಟ್ ತೂಕದ ವಜ್ರದ ಕಲ್ಲು ಸಿಕ್ಕಿದೆ. ಕೃಷ್ಣಕಲ್ಯಾಣಪುರದಲ್ಲಿ ಲಖನ್ ಯಾದವ್ 14.98 ಕ್ಯಾರೆಟ್ ತೂಕದ ವಜ್ರದ ಕಲ್ಲು ದೊರೆತಿದೆ.
7.44 ಕ್ಯಾರೆಟ್ ತೂಕದ ಕಲ್ಲಿನ ಬೆಲೆ ಸುಮಾರು 30 ಲಕ್ಷ ರೂಪಾಯಿ ಆಗಬಹುದು. 14.98 ಕ್ಯಾರೆಟ್ ತೂಕದ ಬೆಲೆ ವಜ್ರದ ಕಲ್ಲಿನ ಬೆಲೆ 60 ಲಕ್ಷಕ್ಕೂ ಅಧಿಕ ಇರಬಹುದು ಎಂದು ಅಂದಾಜಿಸಲಾಗಿದೆ. ಕಲ್ಲುಗಳನ್ನು ವಜ್ರ ಕಚೇರಿಯಲ್ಲಿ ಇಡಲಾಗಿದ್ದು, ಹರಾಜು ಹಾಕಲಾಗುವುದು. ಶೇಕಡ 12.5 ರಷ್ಟು ರಾಯಧನ ಕಡಿತಗೊಳಿಸಿ ಕಾರ್ಮಿಕರಿಗೆ ಹಣ ನೀಡಲಾಗುವುದು.
ಬುಂದೇಲ್‌ಖಂಡ್‌ನ ಹಿಂದುಳಿದ ಪ್ರದೇಶದಲ್ಲಿ ನೆಲೆಗೊಂಡಿರುವ ಪನ್ನಾ ವಜ್ರ ಗಣಿಗಳಿಗೆ ಹೆಸರುವಾಸಿಯಾಗಿದೆ. ಇಂತಹ ಪ್ರದೇಶದಲ್ಲಿ ಸಣ್ಣ ರೈತ, ಕಾರ್ಮಿಕರಾಗಿರುವ ಇವರಿಗೆ ವಜ್ರದ ಕಲ್ಲು ಸಿಕ್ಕಿದ್ದು, ಅದೃಷ್ಟ ಖುಲಾಯಿಸಿದೆ ಎನ್ನಲಾಗಿದೆ.