ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿಯೊಂದಿದೆ. ನೌಕರರ ಗಳಿಕೆ ರಜೆ ಹೆಚ್ಚಿಸಲು ಮೋದಿ ಸರ್ಕಾರ ನಿರ್ಧರಿಸುವ ಸಾಧ್ಯತೆಯಿದೆ. ಅಕ್ಟೋಬರ್ 1 ರಿಂದ ಮೋದಿ ಸರ್ಕಾರ ಕಾರ್ಮಿಕ ಸಂಹಿತೆಯ ನಿಯಮಗಳನ್ನು ಜಾರಿಗೆ ತರುವ ನಿರೀಕ್ಷೆಯಿದ್ದು, ಜಾರಿಗೆ ಬಂದಲ್ಲಿ ನೌಕರರ ಗಳಿಕೆ ರಜೆ 240ರಿಂದ 300 ಕ್ಕೆ ಏರಿಕೆಯಾಗಲಿದೆ.
ಕಾರ್ಮಿಕ ಸಚಿವಾಲಯ, ಕಾರ್ಮಿಕ ಒಕ್ಕೂಟ ಮತ್ತು ಉದ್ಯಮದ ಪ್ರತಿನಿಧಿಗಳ ನಡುವೆ ಕಾರ್ಮಿಕ ಸಂಹಿತೆ ನಿಯಮಗಳಲ್ಲಿ ಬದಲಾವಣೆ ಮಾಡುವ ಬಗ್ಗೆ ಚರ್ಚೆ ನಡೆದಿತ್ತು. ಕೆಲಸದ ಸಮಯ, ವಾರ್ಷಿಕ ರಜಾ ದಿನಗಳು, ಪಿಂಚಣಿ, ಪಿಎಫ್, ಮನೆ ಸಂಬಳ, ನಿವೃತ್ತಿ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆದಿತ್ತು. ಈ ವೇಳೆ ಗಳಿಕೆ ರಜೆಯನ್ನು 240ರಿಂದ 300ಕ್ಕೆ ಹೆಚ್ಚಿಸುವ ಬಗ್ಗೆ ಚರ್ಚೆ ನಡೆದಿತ್ತು.
ಏಪ್ರಿಲ್ 1, 2021ರಿಂದ ಈ ನಿಯಮಗಳನ್ನು ಜಾರಿಗೆ ತರಲು ಸರ್ಕಾರ ಬಯಸಿತ್ತು. ಆದರೆ ರಾಜ್ಯಗಳು ಇದಕ್ಕೆ ಸಿದ್ಧವಾಗದ ಕಾರಣ ಹಾಗೂ ಎಚ್ ಆರ್ ನೀತಿಯನ್ನು ಬದಲಾಯಿಸಲು ಹೆಚ್ಚಿನ ಸಮಯ ಕೇಳಿದ್ದರಿಂದ ಕಾರ್ಮಿಕ ಸಂಹಿತೆಯ ನಿಯಮಗಳನ್ನು ಜುಲೈ 1ರವರೆಗೆ ಮುಂದೂಡಲಾಗಿತ್ತು. ಆದ್ರೆ ರಾಜ್ಯಗಳು ಈ ನಿಯಮಗಳನ್ನು ಜಾರಿಗೆ ತರಲು ಹೆಚ್ಚಿನ ಸಮಯವನ್ನು ಕೋರಿದ್ದವು. ಈ ಕಾರಣದಿಂದಾಗಿ ಅಕ್ಟೋಬರ್ 1 ರವರೆಗೆ ಅವಕಾಶ ನೀಡಲಾಗಿದೆ.