
ಗದಗ: ಗದಗ ನಗರದಲ್ಲಿ ಮಣ್ಣು ಕುಸಿದು ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ. ನಜೀರ್ ಸಾಬ್ ಬೈಲಹುಲಿ(44) ಮೃತಪಟ್ಟ ಕಾರ್ಮಿಕ ಎಂದು ಹೇಳಲಾಗಿದೆ.
ನಗರಸಭೆ ವಾಟರ್ ಮ್ಯಾನ್ ಮಂಜುನಾಥ್ ಪಲ್ಲೆದ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳು ಮಂಜುನಾಥ್ ಅವರನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗದಗ ನಗರದ ಟಿಪ್ಪುಸುಲ್ತಾನ್ ಸರ್ಕಲ್ ನಲ್ಲಿ ನಿನ್ನೆ ಸಂಜೆ ಘಟನೆ ನಡೆದಿದೆ.
ಗ್ಯಾಸ್ ಪೈಪ್ ಲೈನ್ ಕಂಪನಿಯ ಜೆಸಿಬಿ ಸಿಬ್ಬಂದಿ ಎಡವಟ್ಟು ಮಾಡಿದ್ದರಿಂದ ಮಣ್ಣು ಕುಸಿದಿದೆ ಎಂದು ಆರೋಪಿಸಲಾಗಿದೆ. ನನ್ನ ಗಂಡನ ಸಾವಿಗೆ ನಗರಸಭೆ ಅಧಿಕಾರಿಗಳು ಮತ್ತು ಗ್ಯಾಸ್ ಪೈಪ್ ಲೈನ್ ಕಂಪನಿ ಕಾರಣವೆಂದು ಮೃತರ ಪತ್ನಿ ದೂರು ನೀಡಿದ್ದಾರೆ.