
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಸಮೀಪದ ಸಾವ್ಯ ಗ್ರಾಮದಲ್ಲಿ ಮರ ಕತ್ತರಿಸುವಾಗ ಗರಗಸ ಕುತ್ತಿಗೆಗೆ ತಾಗಿ ಕಾರ್ಮಿಕ ಮೃತಪಟ್ಟಿದ್ದಾರೆ.
ಪ್ರಶಾಂತ ಪೂಜಾರಿ(36) ಮೃತಪಟ್ಟವರು ಎಂದು ಹೇಳಲಾಗಿದೆ. ಮರ ಕತ್ತರಿಸುವಾಗ ಪ್ರಶಾಂತ್ ಪೂಜಾರಿ ಆಯತಪ್ಪಿ ಕೆಳಗೆ ಬಿದ್ದಿದ್ದು. ಅವರ ಕೈಯಲ್ಲಿದ್ದ ಮರ ಕತ್ತರಿಸುವ ಯಂತ್ರ ಚಾಲಿತ ಗರಗಸ ಕುತ್ತಿಗೆ ಭಾಗಕ್ಕೆ ತಗುಲಿದೆ. ಯಂತ್ರ ಚಾಲನೆಯಲ್ಲಿದ್ದ ಕಾರಣ ಅವರು ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.