
ಮಂಡ್ಯ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬದ ವಿರುದ್ಧ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಕುಟುಂಬದವರನ್ನು ಅಧಿಕಾರಕ್ಕೆ ತರಲು ದೇವೇಗೌಡರ ಕುಟುಂಬ ಒಂದೊಂದು ನರಬಲಿ ಕೊಡುತ್ತೆ ಎಂದು ಆರೋಪಿಸಿದ್ದಾರೆ.
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಮೇಗೌಡ, ಲೋಕಸಭಾ ಚುನಾವಣೆಯಲ್ಲಿ ಡಾ.ಮಂಜುನಾಥ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲು ಯೋಗೇಶ್ವರ್ ಶ್ರಮಿಸಿದರು. ಆದರೆ ಈಗ ಚನ್ನಪಟ್ಟಣದಲ್ಲಿ ಯೋಗೇಶ್ವರ್ ಅವರನ್ನೇ ಬಲಿ ಪಡೆದಿದ್ದಾರೆ. ತಮ್ಮ ಕುಟುಂಬದವರನ್ನು ಅಧಿಕಾರಕ್ಕೆ ತರಲು ದೇವೇಗೌಡರ ಕುಟುಂಬ ಒಂದೊಂದು ನರಬಲಿ ಪಡೆಯುತ್ತೆ ಎಂದು ಕಿಡಿಕಾರಿದ್ದಾರೆ.
ಚನ್ನಪಟ್ಟಣದಲ್ಲಿ ನಿಖಿಲ್ ಅಲ್ಲ, ಕುಮಾರಸ್ವಾಮಿ ನಿಂತರೂ ಏನೂ ಮಾಡೋಕಾಗಲ್ಲ. ಚನ್ನಪಟ್ಟಣ ಜನ ದಡ್ಡರಲ್ಲ. ಯೋಗೇಶ್ವರ್ ಗೆಲುವುವು ನಿಶ್ಚಿತ ಎಂದು ಹೇಳಿದ್ದಾರೆ.
ಯೋಗೇಶ್ವರ್ ಅವರನ್ನು ಬಿಜೆಪಿಯಿಂದ ಆಚೆ ಕಳುಹಿಸಲು ಬಿ.ವಿ.ವಿಜಯೇಂದ್ರ, ಯಡಿಯೂರಪ್ಪ ಕಾರಣ. ಬಿಜೆಪಿಯಲ್ಲಿನ ಗುಮ್ಪುಗಾರಿಕೆಯಿಂದ ಯೋಗೇಶ್ವರ್ ಹೊರಹೋದರು ಎಂದು ತಿಳಿಸಿದ್ದಾರೆ.