
ಮಕ್ಕಳ ಗುಂಪಿನತ್ತ ಮಿನಿ ಟ್ರಕ್ ನುಗ್ಗಿ ಬರುತ್ತಿರುವುದನ್ನ ವೀಡಿಯೊ ತೋರಿಸುತ್ತದೆ. ಟ್ರಕ್ ನಿಯಂತ್ರಣ ತಪ್ಪಿ ಪಲ್ಟಿಯಾಗುತ್ತಿದ್ದಂತೆ ಚಾಲಕ ಅದನ್ನು ಹಿಂಬಾಲಿಸುತ್ತಿರುವುದನ್ನು ಕಾಣಬಹುದು. ಘಟನೆಯಿಂದಾಗಿ ಕನಿಷ್ಠ 31 ಮಕ್ಕಳು ಗಾಯಗೊಂಡಿದ್ದಾರೆ ಎಂದು ಕೆಲವು ವರದಿಗಳು ಹೇಳಿವೆ.
ಇದರಲ್ಲಿ 18 ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, 7 ಮಂದಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.