ದೇಶದಲ್ಲಿ ಒಮಿಕ್ರಾನ್ ಹಾಗೂ ಕೊರೋನಾ ಸೋಂಕು ಹೆಚ್ಚಾಗುತ್ತಿರುವುದನ್ನ ಗಮನದಲ್ಲಿಟ್ಟುಕೊಂಡು RBI, ಬ್ಯಾಂಕ್ ಗ್ರಾಹಕರಿಗೆ KYC ಸಲ್ಲಿಸಲು ಮೂರು ತಿಂಗಳ ಕಾಲಾವಕಾಶ ನೀಡಿದೆ. ಗುರುವಾರ ಮಧ್ಯಾಹ್ನ ಈ ಬಗ್ಗೆ ಮಾಹಿತಿ ನೀಡಿರುವ ಭಾರತೀಯ ರಿಸರ್ವ್ ಬ್ಯಾಂಕ್, KYC ಮಾಹಿತಿಯನ್ನು ಅಪ್ಡೇಟ್ ಮಾಡಲು, ಮೂರು ತಿಂಗಳು ಅಂದರೆ 31 ಮಾರ್ಚ್ 2022 ರವರೆಗೆ ಗಡುವು ನೀಡಿದೆ.
ಓಮಿಕ್ರಾನ್ ರೂಪಾಂತರದಿಂದ ಈಗಾಗ್ಲೇ ಹಲವು ರಾಜ್ಯಗಳಲ್ಲಿ ಅರ್ಧ ಲಾಕ್ ಡೌನ್ ಜೊತೆಗೆ ಟೈಟ್ ರೂಲ್ಸ್ ಏರಿಕೆಯಾಗಿದೆ. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಈ ಸಡಿಲಿಕೆ ನೀಡಲಾಗಿದೆ. ಈ ಬಗ್ಗೆ ಅಧಿಕೃತ ಸುತ್ತೋಲೆ ಹೊರಡಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಚ್ ತಿಂಗಳಾಂತ್ಯದವರೆಗೆ KYC ಅಪ್ಡೇಟ್ ಗೆ ಅವಧಿ ವಿಸ್ತರಣೆ ಮಾಡಿದೆ.
ಈ ಹಿಂದೆ ಈ ವರ್ಷಾಂತ್ಯದೊಳಗೆ ಬ್ಯಾಂಕ್ ಕೆವೈಸಿ ಕೆಲಸ ಸಂಪೂರ್ಣ ಮಾಡಬೇಕು ಎಂದು RBI ಗಡುವು ನೀಡಿತ್ತು.