ಕೆ.ವೈ.ಸಿ. ಅಪ್ ಡೇಟ್ ಮಾಡದಿದ್ದರೆ ದಂಡ ವಿಧಿಸಲಾಗುತ್ತದೆ ಎಂಬ ವದಂತಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು ಇದರ ಬಗ್ಗೆ ಎಲ್ಐಸಿ ತನ್ನ ಗ್ರಾಹಕರನ್ನು ಎಚ್ಚರಿಸಿ ಸಾರ್ವಜನಿಕ ಪ್ರಕಟಣೆ ತಿಳಿಸಿದೆ.
ಎಲ್‌ಐಸಿ ತನ್ನ ನೋಟಿಸ್‌ನಲ್ಲಿ ಕೆವೈಸಿ ಅಪ್ ಡೇಟ್ ಗೆ ಸಂಬಂಧಿಸಿದಂತೆ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನಕಲಿ ಮಾಹಿತಿ ಹರಡಲಾಗುತ್ತಿದೆ. ಕೆ.ವೈ.ಸಿ. ವಿವರಗಳನ್ನು ಎಲ್‌ಐಸಿಯೊಂದಿಗೆ ನವೀಕರಿಸಲು ವಿಫಲವಾದರೆ ದಂಡ ಶುಲ್ಕವನ್ನು ವಿಧಿಸಲಾಗುತ್ತದೆ. ಮತ್ತು ವೈಯಕ್ತಿಕ ವಿವರ ಅಥವಾ ದಾಖಲೆಗಳನ್ನು ಹಂಚಿಕೊಳ್ಳಲು ಕೇಳಲಾಗುತ್ತಿದೆ ಎಂಬಂತಹ ಪ್ರಕಟಣೆಗಳು ನಕಲಿ ಎಂದಿದೆ.
“ನಮ್ಮ ಪಾಲಿಸಿದಾರರನ್ನು ಅವರ KYC ವಿವರಗಳನ್ನು ನವೀಕರಿಸಲು ನಾವು ಪ್ರೋತ್ಸಾಹಿಸುತ್ತೇವೆಯಾದರೂ, ಹಾಗೆ ಮಾಡಲು ವಿಫಲವಾದರೆ ನಮ್ಮಿಂದ ಯಾವುದೇ ದಂಡ ಶುಲ್ಕ ವಿಧಿಸಲಾಗುವುದಿಲ್ಲ ಎಂದು LIC ಸ್ಪಷ್ಟಪಡಿಸಲು ಬಯಸುತ್ತದೆ. ಸಾರ್ವಜನಿಕರು ಇಂತಹ ಸುಳ್ಳುಗಳಿಗೆ ಬಲಿಯಾಗದಂತೆ ವಿನಂತಿಸಲಾಗಿದೆ ಎಂದು ಎಲ್ಐಸಿ ಹೇಳಿದೆ.
ಅಧಿಕೃತ ಅಧಿಸೂಚನೆಗಳಿಗಾಗಿ ಪಾಲಿಸಿದಾರರು LIC ಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವಂತೆ , ಅಥವಾ ಅಧಿಕೃತ ಕಾಲ್ ಸೆಂಟರ್ ಸಂಖ್ಯೆಗಳಿಗೆ ಕಾಲ್ ಮಾಡಿ ವಿವರ ಪಡೆಯುವಂತೆ ತಿಳಿಸಿದೆ.