
ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ.
ಆಸಕ್ತರು ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಡಿಸೆಂಬರ್ 26,2022ರೊಳಗೆ ಅರ್ಜಿ ಸಲ್ಲಿಸಬಹುದು.
ಖಾಲಿ ಹುದ್ದೆಗಳ ವಿವರ:
ಪ್ರಾಥಮಿಕ ಶಿಕ್ಷಕರು (PRT)- 6414 ಹುದ್ದೆಗಳು
ಸಹಾಯಕ ಆಯುಕ್ತರು – 52 ಹುದ್ದೆಗಳು
ಪ್ರಿನ್ಸಿಪಾಲ್ – 239 ಹುದ್ದೆಗಳು
ಉಪ ಪ್ರಾಂಶುಪಾಲರು – 203 ಹುದ್ದೆಗಳು
ಸ್ನಾತಕೋತ್ತರ ಶಿಕ್ಷಕರು (PGT) – 1409 ಹುದ್ದೆಗಳು
ತರಬೇತಿ ಪಡೆದ ಪದವೀಧರ ಶಿಕ್ಷಕರು (TGT) – 3176 ಹುದ್ದೆಗಳು
ಗ್ರಂಥಪಾಲಕ – 355 ಹುದ್ದೆಗಳು
PRT (ಸಂಗೀತ) – 303 ಹುದ್ದೆಗಳು
ಹಣಕಾಸು ಅಧಿಕಾರಿ – 6 ಹುದ್ದೆಗಳು
ಸಹಾಯಕ ಇಂಜಿನಿಯರ್ (ಸಿವಿಲ್) – 2 ಹುದ್ದೆಗಳು
ಸಹಾಯಕ ವಿಭಾಗ ಅಧಿಕಾರಿ (ASO) – 156 ಹುದ್ದೆಗಳು
ಹಿಂದಿ ಅನುವಾದಕ – 11 ಹುದ್ದೆಗಳು
ಹಿರಿಯ ಸೆಕ್ರೆಟರಿಯೇಟ್ ಸಹಾಯಕ (UDC) – 322 ಹುದ್ದೆಗಳು
ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ (LDC) – 702 ಹುದ್ದೆಗಳು
ಸ್ಟೆನೋಗ್ರಾಫರ್ ಗ್ರೇಡ್-II – 54 ಹುದ್ದೆಗಳು
ಬೋಧಕ ಮತ್ತು ಬೋಧಕೇತರ ಹುದ್ದೆಗಳಿಗೆ ನೇಮಕಾತಿ ನಿಯಮಾನುಸಾರ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆ/ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅಧಿಕೃತ ವೆಬ್‌ಸೈಟ್ https://kvsangathan.nic.in/ ಗೆ ಭೇಟಿ ನೀಡಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸುವ ಮೂಲಕ ಡಿಸೆಂಬರ್ 26,2022ರ ರಾತ್ರಿ 11:59ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.