
ಕುಂಭಮೇಳದಲ್ಲಿ ರುದ್ರಾಕ್ಷಿ ಮಾರಾಟ ಮಾಡುತ್ತಿದ್ದ ಮೋನಲಿಸಾ ತನ್ನ ಸುಂದರ ಕಣ್ಣುಗಳಿಂದ ಎಲ್ಲರ ಗಮನ ಸೆಳೆದಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಅವರ ಫೋಟೋಗಳು ವೈರಲ್ ಆಗುತ್ತಿದ್ದಂತೆ ಅವರು ಒಂದೇ ದಿನದಲ್ಲಿ ಸೆಲೆಬ್ರಿಟಿಯಾದರು.
ಆದರೆ, ಈ ಖ್ಯಾತಿಯ ಹಿಂದೆ ಅವರು ಎದುರಿಸುತ್ತಿದ್ದ ಸಮಸ್ಯೆಗಳನ್ನು ಅನೇಕರಿಗೆ ಗೊತ್ತಿರಲಿಲ್ಲ. ತನ್ನ ಮನೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಮೋನಲಿಸಾ, ತಾನು 50 ಕ್ಕೂ ಹೆಚ್ಚು ಜನರೊಂದಿಗೆ ಒಂದು ಮನೆಯಲ್ಲಿ ವಾಸಿಸುತ್ತಿದ್ದೇನೆ ಎಂದು ಹೇಳಿದ್ದರು. ಕುಂಭಮೇಳದಲ್ಲಿ ರುದ್ರಾಕ್ಷಿ ಮಾರಾಟವಾಗದೆ, ತನ್ನ ಇನ್ಸ್ಟಾಗ್ರಾಂ ಖಾತೆಯನ್ನು ಹ್ಯಾಕ್ ಮಾಡಿದ್ದರಿಂದ ತಾನು ತುಂಬಾ ಕಷ್ಟದಲ್ಲಿರುವುದಾಗಿ ತಮ್ಮ ಅಳಲು ತೋಡಿಕೊಂಡಿದ್ದರು.
ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕರು ಮೋನಲಿಸಾಗೆ ತಮ್ಮ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಅವರ ಸಂಬಂಧಿಕರು ಮಾತನಾಡಿ, ಕುಂಭಮೇಳದಲ್ಲಿ ಜನರು ಅವರನ್ನು ಗುಪ್ತವಾಗಿ ಚಿತ್ರೀಕರಿಸುತ್ತಿದ್ದು, ಅವರಿಗೆ ಅಸುರಕ್ಷತೆ ಕಾಡುತ್ತಿತ್ತು ಎಂದು ಹೇಳಿದ್ದಾರೆ. ಆದ್ದರಿಂದ ಅವರ ತಂದೆ ಮೋನಲಿಸಾಗೆ ಮನೆಗೆ ಬರುವಂತೆ ತಿಳಿಸಿದ್ದರು.
తన ఇంటిని చూపించిన ‘కుంభమేళా’ మోనాలిసా.
ఉత్తరప్రదేశ్లోని ప్రయాగ్రాజ్లో మహా కుంభమేళాలో సెన్సేషన్గా మారిన మోనాలిసా#Monalisa #MonalisaBhosle #KumbhMela2025 #KumbhMela #Prayagraj #Tupaki pic.twitter.com/Uwvssr4DsM
— Tupaki (@tupaki_official) January 27, 2025