
ಬೆಂಗಳೂರು: ಕುಂಭಮೇಳ, ತೀರ್ಥಯಾತ್ರೆಗಳ ಹೆಸರಲ್ಲಿ ಪ್ಯಾಕೇಜ್ ಟೂರ್ ಕರೆದಿಉಕೊಂಡು ಹೋಗುವುದಾಗಿ ಹೇಳಿ ಲಕ್ಷ ಲಕ್ಷ ವಂಚನೆ ಮಾಡಿದ್ದ ಆರೋಪಿಯನ್ನು ಬೆಂಗಳೂರಿನ ಗೋವಿಂದರಜನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಘವೇಂದ್ರ ರಾವ್ ಬಂಧಿತ ಆರೋಪಿ. ಪಾಂಚಜನ್ಯ ಟೂರ್ಸ್ & ಟ್ರಾವೆಲ್ಸ್ ಹೆಸರಲ್ಲಿ ಫೇಸ್ ಬುಕ್ ನಲ್ಲಿ ಜಾಹೀರಾತು ಮೂಲಕ ಆರೋಪಿ ಅಮಾಯಕರನ್ನು ಸಂಪರ್ಕ ಮಾಡುತ್ತಿದ್ದ. ಅಯೋಧ್ಯೆ, ಕಾಶಿ ಪ್ರಯಾಗ್ ರಾಜ್ ಸೇರಿದಂತೆ ವಿವಿಧ ಕ್ಷೇತ್ರಗಳ ಯಾತ್ರೆಗೆ ಪ್ರವಾಸದ ಪ್ಯಾಕೇಜ್ ನೀಡಲಾಗುವುದು ಎಂದು ಹೇಳುತ್ತಿದ್ದ.
7 ದಿನಗಳ ಪ್ಯಕಏಜ್ ಗೆ 49 ಸಾವಿರ ಪಡೆಯುತ್ತಿದ್ದ. ಹೀಗೆ ಪ್ರವಾಸದ ಹೆಸರಲ್ಲಿ 70 ಲಕ್ಷ ರೂಪಾಯಿ ವಂಚಿಸಿದ್ದ. ಹೀಗೆ ವಂಚಿಸಿದ ಹಣವನ್ನು ಬೆಟ್ಟಿಂಗ್ ದಂಧೆಗೆ ಬಳಸುತ್ತಿದ್ದ. ರಾಘವೇಂದ್ರ ರಾವ್ ವಿರುದ್ಧ 20 ಜನರು ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಇದೀಗ ಆರೋಪಿಯನ್ನು ಬಂಧಿಸಿದ್ದಾರೆ.